ಬೆಂಗಳೂರು: ಕಾನೂನು ಬಾಹಿರವಾಗಿ ವಶಕ್ಕೆ ಪಡೆದಿದ್ದ ಆಟೋ ಹಿಂದಿರುಗಿಸಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಎ ಎಸ್ ಐ ಹಾಗೂ ಲಂಚದ ಹಣ ಸ್ವೀಕರಿಸುತ್ತಿದ್ದ ಇಬ್ಬರು ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಸಂಜಯನಗರ ವ್ಯಾಪ್ತಿಯಲ್ಲಿ ನಡೆದಿದೆ.
ಸಜಯ ನಗರ ಠಾಣೆಯ ಎಸ್ ಎಸ್ ಐ ವಿಜಯ್ ಕುಮಾರ್ ಹಾಗೂ ಸೈಯ್ಯದ್ ರಿಜ್ವಾನ್ ಬಂಧಿತರು. ಕೆ.ಜಿ.ಹಳ್ಳಿ ನಿವಾಸಿ ಮೊಹಮ್ಮದ್ ಸುಜತ್ ಎಂಬಾತನಿಂದ ಜಪ್ತಿ ಮಾಡಿದ್ದ ಆಟೋವನ್ನು ಬಿಡುಗಡೆ ಮಾಡಲು ಎಎಸ್ಐ ವಿಜಯ್ ಕುಮಾರ್ 50 ಸಾವಿರ ರೂಪಾಯಿ ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದ ಬಗ್ಗೆ ಲೋಕಾಯುಕ್ತದಲ್ಲಿ ದೀರು ದಾಖಲಾಗಿತ್ತು.
ಎಎಸ್ಐ ವಿಜಯ್ ಕುಮಾರ್ ಪರವಾಗಿ 40 ಸಾವಿರ ಲಂಚ ಸ್ವೀಕರಿಸುತ್ತಿದ್ದ ಸೈಯ್ಯದ್ ರಿಜ್ವಾನ್ ನನ್ನು ಲೋಕಾಯುಕ್ತ ಅಧಿಕಾರಿಗಳು ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ.