ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಡ್ರೀಮ್ ಪ್ರಾಜೆಕ್ಟ್ ‘ಗಂಧದಗುಡಿ’ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ಅಕ್ಟೋಬರ್ 28 ರಂದು ‘ಗಂಧದಗುಡಿ’ ಸಾಕ್ಷ್ಯ ಚಿತ್ರ ಬಿಡುಗಡೆಯಾಗಲಿದೆ.
ನಟ ಪುನೀತ್ ರಾಜಕುಮಾರ್ ಪುಣ್ಯ ಸ್ಮರಣೆಗೆ ಒಂದು ದಿನ ಮೊದಲು ‘ಗಂಧದಗುಡಿ’ ಸಾಕ್ಷ್ಯಚಿತ್ರ ಬಿಡುಗಡೆ ಮಾಡಲಾಗುವುದು. 2021 ಅಕ್ಟೋಬರ್ 29 ರಂದು ಪುನೀತ್ ವಿಧಿವಶರಾಗಿದ್ದರು. ಪುನೀತ್ ರಾಜಕುಮಾರ್ ಅವರ ಕೊನೆಯ ಪ್ರೀತಿಯ ಕಾಣಿಕೆ ಗಂಧದ ಗುಡಿ ಸಾಕ್ಷ್ಯಚಿತ್ರ ಬಿಡುಗಡೆಯ ಬಗ್ಗೆ ಅಶ್ವಿನಿ ಪುನೀತ್ ರಾಜಕುಮಾರ್ ಮಾಹಿತಿ ನೀಡಿದ್ದಾರೆ. ವಿಶೇಷ ಪತ್ರವೊಂದನ್ನು ಕೂಡ ಬರೆದಿದ್ದಾರೆ. ಸಾಕ್ಷ್ಯಚಿತ್ರದ ಬಗ್ಗೆ ಪುನೀತ್ ಅವರಿಗಿದ್ದ ಕನಸಿನ ಬಗ್ಗೆ ವಿಶೇಷ ಪತ್ರವನ್ನು ಬರೆದಿದ್ದಾರೆ. ಚಿತ್ರೀಕರಣಕ್ಕೆ ತೆರಳಿದ್ದಾಗ ಆದ ಅನುಭವಗಳ ಬಗ್ಗೆ ಹೇಳಿಕೊಳ್ಳುತ್ತಿದ್ದರು. ಕಾಡಿನ ಅದ್ಭುತಗಳ ಬಗ್ಗೆ ಪತ್ನಿ ಅಶ್ವಿನಿ ಅವರೊಂದಿಗೆ ಪುನೀತ್ ರಾಜಕುಮಾರ್ ಮಾಹಿತಿ ಹಂಚಿಕೊಂಡಿದ್ದರು. ಅವರು ಹೇಳುತ್ತಿದ್ದ ಅಂಶಗಳನ್ನು ಉಲ್ಲೇಖಿಸಿ ಅಶ್ವಿನಿ ಅವರು ಪತ್ರ ಬರೆದಿದ್ದಾರೆ.
ಅಪ್ಪು ಕೊನೆಯ ಚಿತ್ರ. ಅವರು ಅವರಾಗಿಯೇ ಕಾಣಿಸಿಕೊಂಡಿರುವ ವಿಶಿಷ್ಟ ಕಥನ. ಕರ್ನಾಟಕದ ಅದ್ಭುತ ಜಗತ್ತನ್ನು ಅನ್ವೇಷಿಸುವ ಪಯಣ. ಅವರಿಗೆ ಅಪಾರ ಪ್ರೀತಿಯನ್ನು ಕೊಟ್ಟ ನಾಡಿಗೆ ಅವರ ಪ್ರೀತಿಯ ಕಾಣಿಕೆ ಅಕ್ಟೋಬರ್ 28ರಂದು ಬಿಡುಗಡೆಯಾಗಲಿದೆ ಎಂದು ಹೇಳಿದ್ದಾರೆ.