ಬೆಂಗಳೂರು: ಹಿರಿಯ ನಟ ಅಶ್ವತ್ಥನಾರಾಯಣ ಅವರು ಕುಟುಂಬದವರ ವಿರುದ್ಧವೇ ದೂರು ನೀಡಿದ್ದಾರೆ. ಪತ್ನಿ, ಮಗ ಮತ್ತು ಮೂರನೇ ಮಗಳ ವಿರುದ್ಧ ಬಸವೇಶ್ವರನಗರ ಠಾಣೆ ಹಿರಿಯರ ಸಹಾಯವಾಣಿಗೆ ದೂರು ನೀಡಿದ್ದಾರೆ.
ಎರಡನೇ ಪುತ್ರಿಯೊಂದಿಗೆ ಠಾಣೆಗೆ ಆಗಮಿಸಿ ದೂರು ನೀಡಿರುವ ಅಶ್ವತ್ಥನಾರಾಯಣ ಅವರು ಮನೆಯಲ್ಲಿ ಸರಿಯಾಗಿ ನೋಡಿಕೊಳ್ಳುತ್ತಿಲ್ಲ. ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ತಮಗೆ ಬಂದ ಹಣವನ್ನು ಕೊಡದೆ ಹಲ್ಲೆ ಮಾಡಿದ್ದಾರೆ. ಕೊಲೆಗೆ ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ. ಆದರೆ, ಕುಟುಂಬದವರು ಇದನ್ನು ಅಲ್ಲಗಳೆದಿದ್ದಾರೆ. ಅವರನ್ನು ಸರಿಯಾಗಿ ನೋಡಿಕೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ. 90 ವರ್ಷದ ಹಿರಿಯ ನಟ ಅಶ್ವತ್ಥನಾರಾಯಣ ಅವರು 5 ದಶಕಗಳಿಂದ ಚಿತ್ರರಂಗದಲ್ಲಿ ಸೇವೆ ಸಲ್ಲಿಸಿದ್ದಾರೆ.