
ಚಿಕ್ಕಮಗಳೂರು: ಲಾರಿಯಲ್ಲಿ ಸ್ಫೋಟಕ ವಸ್ತುಗಳು ಶಿವಮೊಗ್ಗಕ್ಕೆ ಬಂದಿದೆ. ಯಾರು ಸ್ಪೋಟಕ ತಂದಿದ್ದಾರೆ ಎಂಬುದರ ಬಗ್ಗೆ ತನಿಖೆಯಾಗಬೇಕು ಎಂದು ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ಆಂಧ್ರಪ್ರದೇಶದಿಂದ ಸ್ಫೋಟಕ ವಸ್ತು ಬಂದಿವೆ ಎಂಬ ಮಾಹಿತಿ ಇದೆ. ಮುಂದೆ ಹೀಗಾಗದಂತೆ ಕ್ರಮಕೈಗೊಳ್ಳಲಾಗುವುದು. ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವುದಿಲ್ಲ. ರಾಜ್ಯ ಪೊಲೀಸರು ಸಮರ್ಥರಿದ್ದಾರೆ. ಅವರೇ ತನಿಖೆ ಮಾಡುತ್ತಾರೆ ಎಂದು ತಿಳಿಸಿದ್ದಾರೆ.