ಬೆಂಗಳೂರು: ಆಶಾ ಕಾರ್ಯಕರ್ತೆಯರ ಬಹುದಿನಗಳ ಬೇಡಿಕೆಗೆ ರಾಜ್ಯ ಸರ್ಕಾರ ಸ್ಪಂದಿಸಿದ್ದು, ಗೌರವ ಧನ ಹೆಚ್ಚಳ ಮಾಡುವುದಾಗಿ ಘೋಷಿಸಿದೆ.
2022-23ನೇ ಸಾಲಿನ ಬಜೆಟ್ ಮಂಡನೆ ವೇಳೆ ಸಿಎಂ ಬಸವರಾಜ್ ಬೊಮ್ಮಾಯಿ, ಆಶಾ ಕಾರ್ಯಕರ್ತೆಯರ ಗೌರವ ಧನ 1000 ರೂಪಾಯಿ ಹೆಚ್ಚಿಸುವುದಾಗಿ ಘೋಷಿಸಿದರು.
BIG NEWS: ಉಕ್ರೇನ್ನಲ್ಲಿರುವ ಭಾರತೀಯರ ಸ್ಥಳಾಂತರಕ್ಕೆ ವಿಶೇಷ ಬಸ್ ನಿಯೋಜಿಸಿದ ರಷ್ಯಾ
ಇದೇ ವೇಳೆ ಗ್ರಾಮ ಸಹಾಯಕರಿಗೆ 1000 ರೂ. ಬಿಸಿಯೂಟ ತಯಾರಕರಿಗೂ ತಲಾ 1000 ರೂ.ಗೌರವ ಧನ ಹೆಚ್ಚಳ ಮಾಡಲಾಗಿದೆ. ಅಂಗನವಾಡಿ ಕಾರ್ಯಕರ್ತರಿಗೂ ಗೌರವ ಧನ ಹೆಚ್ಚಳಕ್ಕೆ ಯೋಜನೆ ರೂಪಿಸಲಾಗಿದೆ. ಸೇವಾ ಅನುಭವ ಆಧಾರದಲ್ಲಿ 1000-1500 ರೂಗಳ ಹೆಚ್ಚಳ ಮಾಡಲಾಗುವುದು.
ಪ್ರವಾಸಿ ಗೈಡ್ ಗಳಿಗೆ ಮಾಸಿಕ 2000 ಪ್ರೋತ್ಸಾಹ ಗೌರವ ಧನ ನೀಡಲಾಗುವುದು ಎಂದು ಘೋಷಿಸಿದ್ದಾರೆ.