ಪ್ರಸಿದ್ಧ ಗಾಯಕಿ ಅಶಾ ಭೋಸ್ಲೆ ಅವರ ಮೊಮ್ಮಗಳು ಜನೈ ಭೋಸ್ಲೆ, ಕ್ರಿಕೆಟಿಗ ಮೊಹಮ್ಮದ್ ಸಿರಾಜ್ ಜೊತೆಗಿನ ಫೋಟೋವನ್ನು ಹಂಚಿಕೊಂಡ ನಂತರ ವಿವಾದಕ್ಕೆ ಸಿಲುಕಿದ್ದರು. ಅವರಿಬ್ಬರು ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿದ್ದವು.
ವದಂತಿಗಳು ವೈರಲ್ ಆದ ನಂತರ, ಜನೈ ಮತ್ತು ಸಿರಾಜ್ ತಮ್ಮ ಸಂಬಂಧದ ಬಗ್ಗೆ ಊಹಾಪೋಹಗಳನ್ನು ನಿಲ್ಲಿಸಿದ್ದು, ತಾವಿಬ್ಬರು ಸಹೋದರ ಮತ್ತು ಸಹೋದರಿ ಸಮಾನ ಎಂದಿದ್ದಾರೆ.
ಜನೈ ತಮ್ಮ 23 ನೇ ಹುಟ್ಟುಹಬ್ಬವನ್ನು ಹಲವು ಗಣ್ಯ ವ್ಯಕ್ತಿಗಳ ಉಪಸ್ಥಿತಿಯಲ್ಲಿ ಆಚರಿಸಿಕೊಂಡಿದ್ದು, ಜ್ಯಾಕಿ ಶ್ರಾಫ್, ಮೊಹಮ್ಮದ್ ಸಿರಾಜ್, ಶ್ರೇಯಸ್ ಅಯ್ಯರ್ ಮತ್ತು ಇತರರು ಹುಟ್ಟುಹಬ್ಬದ ಸಂಭ್ರಮದಲ್ಲಿ ಭಾಗವಹಿಸಿದ್ದರು. ಸಿರಾಜ್ ಜೊತೆಗಿನ ಅವರ ಫೋಟೋ ವೈರಲ್ ಆದ ನಂತರ, ಅವರ ಸಂಬಂಧದ ಬಗ್ಗೆ ಊಹಾಪೋಹಗಳು ವೈರಲ್ ಆಗಿದ್ದವು.