ಕ್ರಿಕೆಟರ್, ಮೈದಾನದಲ್ಲಿ ಮಾತ್ರವಲ್ಲ ಮೈದಾನದ ಹೊರಗೂ ಸುದ್ದಿಯಲ್ಲಿರುತ್ತಾರೆ. ಮೊದಲ ಪತ್ನಿಗೆ ವಿಚ್ಛೇದನ ನೀಡಿ, ಎರಡನೇ ಮದುವೆಯಾದ ಅನೇಕರು ನಮ್ಮಲ್ಲಿದ್ದಾರೆ. ಆದ್ರೆ ಇಲ್ಲೊಬ್ಬ ಕ್ರಿಕೆಟರ್ ಮೊದಲ ಪತ್ನಿಗೆ ವಿಚ್ಛೇದನ ನೀಡದೆ, ಎರಡನೇ ಮದುವೆಯಾಗಲು ಹೊರಟಿದ್ದಾರೆ.
ಯಸ್, ಅಫ್ಘಾನಿಸ್ತಾನ ಕ್ರಿಕೆಟ್ ತಂಡದ ನಾಯಕ ಅಸ್ಗರ್ ಅಫ್ಘಾನ್, ಕ್ರಿಕೆಟ್ ಜಗತ್ತಿನಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಈಗ ವೈಯಕ್ತಿಕ ವಿಷಯಕ್ಕೆ ಆಟಗಾರ ಸುದ್ದಿಯಲ್ಲಿದ್ದಾರೆ. ಅಸ್ಗರ್, ಎರಡನೇ ಬಾರಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಅಸ್ಗರ್, ಶೀಘ್ರದಲ್ಲೇ ಎರಡನೇ ಮದುವೆಯಾಗಲಿದ್ದಾರೆ. ಆಶ್ಚರ್ಯಕರ ಸಂಗತಿಯೆಂದರೆ ಅಸ್ಗರ್ ಈಗಾಗಲೇ ಮದುವೆಯಾಗಿ 5 ಮಕ್ಕಳನ್ನು ಹೊಂದಿದ್ದಾರೆ.
ಯಾರೋ ಮಾಡಿದ ತಪ್ಪಿಗೆ ಸೌದಿಯಲ್ಲಿ ಜೈಲುವಾಸ ಅನುಭವಿಸಿ ತಾಯ್ನಾಡಿಗೆ ಮರಳಿದ ಎಸಿ ತಂತ್ರಜ್ಞ
ಅಸ್ಗರ್ ಅಫ್ಘಾನ್, ಭಾವಿ ಎರಡನೇ ಪತ್ನಿಯೊಂದಿಗೆ ಕಳೆದ ವರ್ಷ ನವೆಂಬರ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಅಫ್ಘಾನಿಸ್ತಾನದ ಪತ್ರಕರ್ತರೊಬ್ಬರು ಟ್ವೀಟ್ ಮೂಲಕ ಈ ಮಾಹಿತಿಯನ್ನು ನೀಡಿದ್ದಾರೆ.
ಅಫ್ಘಾನಿಸ್ತಾನದ ನಾಯಕ ಅಸ್ಗರ್ ಅಫ್ಘಾನ್, ತನ್ನ ಜೀವನದಲ್ಲಿ ಎರಡನೇ ಬಾರಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಮೊದಲ ಹೆಂಡತಿಗೆ 5 ಮಕ್ಕಳಿವೆ ಎಂದು ಪತ್ರಕರ್ತರು ಟ್ವೀಟ್ ಮಾಡಿದ್ದಾರೆ. ಅಸ್ಗರ್ 2009 ರಲ್ಲಿ ತಮ್ಮ ತಂಡಕ್ಕೆ ಪಾದಾರ್ಪಣೆ ಮಾಡಿದರು. ಅವರ ನಾಯಕತ್ವದಲ್ಲಿ, ಅಫ್ಘಾನಿಸ್ತಾನ ತಂಡ ಹಲವು ಬಾರಿ ವಿಶ್ವಕಪ್ ಆಡಿದೆ.