alex Certify ಪಾಕಿಸ್ತಾನದಲ್ಲಿ ಟರ್ಕಿ ಮಹಿಳೆ ಟ್ರಿಪ್ ; ಶಾಕ್‌ ಆಗಿಸುವಂತಿದೆ ಜನರ ವರ್ತನೆ | Watch Video | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಾಕಿಸ್ತಾನದಲ್ಲಿ ಟರ್ಕಿ ಮಹಿಳೆ ಟ್ರಿಪ್ ; ಶಾಕ್‌ ಆಗಿಸುವಂತಿದೆ ಜನರ ವರ್ತನೆ | Watch Video

ರಾಜಕೀಯ ಮತ್ತೆ ಸಾಮಾಜಿಕ ಪ್ರಾಬ್ಲಮ್‌ಗಳಿಂದಾಗಿ ಯಾರು ಹೋಗೋಕೆ ಇಷ್ಟಪಡದ ದೇಶಗಳಿಗೆ ಕೆಲವರು ಹೋಗ್ತಾರೆ. ಇತ್ತೀಚೆಗೆ ಇಬ್ಬರು ಟರ್ಕಿ ಮಹಿಳೆಯರು ಮೋಟಾರ್‌ಸೈಕಲ್‌ನಲ್ಲಿ ಪಾಕಿಸ್ತಾನಕ್ಕೆ ಹೋಗಿದ್ದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಚರ್ಚೆ ಹುಟ್ಟುಹಾಕಿದೆ. ಅವರ ಸೇಫ್ಟಿ ಬಗ್ಗೆ ಜನರಿಗೆ ಟೆನ್ಷನ್ ಆಗಿದೆ.

ಎಕ್ಸ್‌ನಲ್ಲಿ @RsdioGenoa ಅನ್ನೋರು ಶೇರ್ ಮಾಡಿರೋ ವಿಡಿಯೋದಲ್ಲಿ ಮಹಿಳೆಯರು ತಿಂಡಿ ಅಂಗಡಿ ಹತ್ತಿರ ನಿಂತಿದ್ದಾರೆ. ಆದ್ರೆ ಅಲ್ಲಿ ತುಂಬಾ ಗಂಡಸರು, ಹುಡುಗರು ಅವರನ್ನ ಕುತೂಹಲದಿಂದ ನೋಡ್ತಿದ್ದಾರೆ.

“ಪಾಕಿಸ್ತಾನದಲ್ಲಿ ಟರ್ಕಿ ಮಹಿಳಾ ಟೂರಿಸ್ಟ್ಸ್. ಈ ಟ್ರಿಪ್ ಹೇಗೆ ಮುಗಿಯತ್ತೋ?” ಅಂತಾ ವಿಡಿಯೋಗೆ ಕ್ಯಾಪ್ಷನ್ ಕೊಟ್ಟಿದ್ದಾರೆ. ಈ ವಿಡಿಯೋ 7 ಮಿಲಿಯನ್ ಜನ ನೋಡಿದ್ದಾರೆ. ಪಾಕಿಸ್ತಾನದಲ್ಲಿ ಮಹಿಳೆಯರ ಸೇಫ್ಟಿ ಬಗ್ಗೆ ಡಿಸ್ಕಷನ್ ಆಗಿದೆ. ಕೆಲವರು ಮಹಿಳೆಯರು ಡೇಂಜರ್ ತಗೊಂಡಿದ್ದಾರೆ ಅಂತಾ ಹೇಳಿದ್ರೆ, ಇನ್ನು ಕೆಲವರು ಟರ್ಕಿ ಮತ್ತೆ ಪಾಕಿಸ್ತಾನದ ಫ್ರೆಂಡ್‌ಶಿಪ್ ಬಗ್ಗೆ ಹೇಳ್ತಿದ್ದಾರೆ. “ಈ ದೇಶಗಳಿಗೆ ಹೋಗೋ ಜನ, ಅದರಲ್ಲೂ ಹೆಣ್ಣುಮಕ್ಕಳು, ನನಗೆ ಅರ್ಥ ಆಗಲ್ಲ. ಈ ದೇಶಗಳು ಹೇಗಿವೆ ಅಂತಾ ಎಲ್ಲರಿಗೂ ಗೊತ್ತು, ಗೊತ್ತಿದ್ರೂ ಯಾಕೆ ಹೋಗ್ತಾರೆ?” ಅಂತಾ ಒಬ್ಬರು ಕಾಮೆಂಟ್ ಮಾಡಿದ್ದಾರೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...