
ರಾಷ್ಟ್ರಪತಿ ಆದ ಬಳಿಕ ರಾಮನಾಥ್ ಕೋವಿಂದ್ ಇದೇ ಮೊದಲ ಬಾರಿಗೆ ತವರಿಗೆ ಭೇಟಿ ನೀಡುತ್ತಿದ್ದಾರೆ. ಈ ರೈಲು ಮಾರ್ಗ ಮಧ್ಯದಲ್ಲಿ ಝಿಂಝಕ್ ಹಾಗೂ ರುರಾದಲ್ಲಿ ನಿಲ್ಲಲಿದೆ. ಇಲ್ಲಿ ಕೋವಿಂದ್ ತಮ್ಮ ಪರಿಚಯಸ್ಥರನ್ನ ಭೇಟಿಯಾಗಲಿದ್ದಾರೆ.
ಅಂದಹಾಗೆ ರಾಷ್ಟ್ರಪತಿ ಈ ರೀತಿ ಪ್ರೆಸಿಡೆನ್ಶಿಯಲ್ ಸಲೂನ್ ಏರುತ್ತಿರೋದು ಇದೇ ಮೊದಲನೇಲ್ಲ. ಈ ರಾಷ್ಟ್ರಪತಿ ಸಲೂನ್ನ್ನು ಕೊನೆಯ ಬಾರಿಗೆ ಡಾ. ಎಪಿಜೆ ಅಬ್ದುಲ್ ಕಲಾಂ 2004ರಲ್ಲಿ ಏರಿದ್ದರು. ಸೆಪ್ಟೆಂಬರ್ 29 – 1952 ರಲ್ಲಿ ಡಾ. ರಾಜೇಂದ್ರ ಪ್ರಸಾದ್ ಕೂಡ ಜಲಂಧರ್ ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದಲ್ಲಿ ರೈಲನ್ನ ಏರಿದ್ದರು. ಇನ್ನು ಡಾ. ಸರ್ವಪಲ್ಲಿ ರಾಧಾಕೃಷ್ಣನ್, ವಿವಿ ಗಿರಿ, ಶ್ರೀ ನೀಲಂ ಸಂಜೀವ್ ರೆಡ್ಡಿ ಸೇರಿದಂತೆ ಹಲವರು ಈ ವಿಶೇಷ ರೈಲನ್ನ ಏರಿದ್ದಾರೆ.


