ರಾತ್ರಿಯ ಸುಖ ನಿದ್ರೆ ನಂತ್ರ ಮನಸ್ಸು ಶಾಂತ ಮತ್ತು ಸಂತೋಷವಾಗಿರುತ್ತದೆ. ಬೆಳಿಗ್ಗೆ ನಾವು ಹೇಗೆ ಏಳುತ್ತೇವೆ ಎಂಬುದು ನಮ್ಮ ಇಡೀ ದಿನವನ್ನು ಅವಲಂಬಿಸಿರುತ್ತದೆ. ಇಡೀ ದಿನ ಖುಷಿಯಾಗಿರಬೇಕೆಂದ್ರೆ ಮುಂಜಾನೆ ಉತ್ಸಾಹ ಹೆಚ್ಚಾಗಿರಬೇಕು. ಬೆಳಿಗ್ಗೆ ಏಳ್ತಿದ್ದಂತೆ ನಮ್ಮ ಕಣ್ಣಿಗೆ ಬೀಳುವ ವಸ್ತುಗಳು ಹಾಗೂ ನಾವು ಹೊರಗೆ ಹೋಗುವಾಗ ಕಾಣಿಸುವ ವಸ್ತುಗಳು ನಮ್ಮ ದಿನದ ಕೆಲಸದ ಮೇಲೆ ಪ್ರಭಾವ ಬೀರುತ್ತವೆ.
ಬೆಳಿಗ್ಗೆ ಕಣ್ಣು ಬಿಡ್ತಿದ್ದಂತೆ ಹಾಲು ಅಥವಾ ಮೊಸರು ಕಣ್ಣಿಗೆ ಬಿದ್ರೆ ಇದು ಬಹಳ ಶುಭ ಸಂಕೇತ.
ಬೆಳ್ಳಂಬೆಳಿಗ್ಗೆ ಭಿಕ್ಷುಕ ಮನೆಗೆ ಬಂದ್ರೆ ಎಲ್ಲಿಯೋ ಸಿಕ್ಕಿಬಿದ್ದ ನಿಮ್ಮ ಹಣ ಶೀಘ್ರವೇ ನಿಮ್ಮ ಕೈಸೇರಲಿದೆ ಎಂದರ್ಥ.
ಶುಭ ಕಾರ್ಯಕ್ಕೆ ಹೊರಟ ವೇಳೆ ಬೆಲ್ಲ ಹಿಡಿದುಕೊಂಡು ವ್ಯಕ್ತಿ ಮುಂದೆ ಬಂದ್ರೆ ಅದು ಶುಭಕರ.
ಮನೆಯಿಂದ ಹೊರಗೆ ಬರ್ತಿದ್ದಂತೆ ತುಂಬಿದ ಪಾತ್ರೆಯಲ್ಲಿ ಹಾಲು ಅಥವಾ ನೀರು ತೆಗೆದುಕೊಂಡು ಹೋಗ್ತಿದ್ದರೆ ಅದು ಮಂಗಳಕರ.
ಯಾತ್ರೆಗೆ ಹೋಗುವ ವೇಳೆ ದೇವರ ಪೂಜೆ, ಆರತಿ ಅಥವಾ ಗಂಟೆ ಶಬ್ಧ ಕೇಳಿದ್ರೆ ಇದನ್ನು ಶುಭವೆಂದು ಪರಿಗಣಿಸಲಾಗುತ್ತದೆ.
ಹೊರಗೆ ಹೋಗುವ ವೇಳೆ ಬಟ್ಟೆ ಧರಿಸುವ ಸಂದರ್ಭದಲ್ಲಿ ಹಣ ಕೆಳಗೆ ಬಿದ್ರೆ ಧನ ಪ್ರಾಪ್ತಿಯಾಗುತ್ತದೆ ಎಂಬ ಸಂಕೇತ.