![](https://kannadadunia.com/wp-content/uploads/2021/11/FDF3wyVWUAIh9cx.jpg)
ಇಂದು ಹಲವಾರು ರಾಜ್ಯಗಳಲ್ಲಿ ಶಾಲೆಗಳು ಮತ್ತೆ ತೆರೆಯುತ್ತಿದ್ದಂತೆ, ಬ್ಯಾಕ್ ಟು ಸ್ಕೂಲ್ ಫೋಟೋಗಳನ್ನು ಟ್ವಿಟ್ಟರ್ ನಲ್ಲಿ ಶೇರ್ ಮಾಡಲಾಗುತ್ತಿದೆ.
ದೇಶದ ಹಲವಾರು ರಾಜ್ಯಗಳಲ್ಲಿ ಶಾಲೆಗಳು ಸೋಮವಾರ ವಿದ್ಯಾರ್ಥಿಗಳಿಗೆ ಬಾಗಿಲುಗಳನ್ನು ಪುನಃ ತೆರೆದಿವೆ. ದೀರ್ಘ ಕಾಲದಿಂದ ಕತ್ತಲೆಯಿಂದ ಕೂಡಿದ್ದ ಶಾಲಾ ತರಗತಿಗಳಿಗೆ ಇಂದು ಸೂರ್ಯನ ಬೆಳಕು ಬಿದ್ದಿದೆ. ಕೋವಿಡ್ ನಿಯಮಾವಳಿಯೊಂದಿಗೆ ಶಾಲೆಗಳನ್ನು ತೆರೆಯಲಾಗಿದ್ದು, ಕಟ್ಟುನಿಟ್ಟಾಗಿ ಪಾಲಿಸುವಂತೆ ವಿದ್ಯಾರ್ಥಿಗಳಿಗೆ ಸೂಚಿಸಲಾಗಿದೆ.
ಕೋವಿಡ್-19 ಸಾಂಕ್ರಾಮಿಕ ರೋಗವು ಕಡಿಮೆಯಾದ ನಂತರ, ದೆಹಲಿಯ ಶಾಲೆಗಳು ಸೋಮವಾರದಿಂದ ಶೇಕಡಾ 50 ರಷ್ಟು ಹಾಜರಾತಿಯೊಂದಿಗೆ ಎಲ್ಲಾ ತರಗತಿಗಳು ಮತ್ತೆ ತೆರೆದಿದೆ.
ಶಿಕ್ಷಣ ನಿರ್ದೇಶನಾಲಯದ ಸುತ್ತೋಲೆಯ ಪ್ರಕಾರ, ವಿದ್ಯಾರ್ಥಿಗಳು ಪೋಷಕರ ಒಪ್ಪಿಗೆಯೊಂದಿಗೆ ಶಾಲೆಗೆ ಹಾಜರಾಗುವುದನ್ನು ಖಚಿತಪಡಿಸಿಕೊಳ್ಳಲು ಶಾಲಾ ಮುಖ್ಯಸ್ಥರಿಗೆ ಸೂಚಿಸಲಾಗಿದೆ. ಶೇಕಡಾ 50 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳನ್ನು ಶಾಲೆಗಳಿಗೆ ಹಾಜರಾಗುವಂತಿಲ್ಲ ಎಂದು ಆದೇಶಿಸಿದೆ.
ಒಂದೂವರೆ ವರ್ಷಗಳ ಸುದೀರ್ಘ ವಿರಾಮದ ನಂತರ ಕೇರಳ ರಾಜ್ಯ ಕೂಡ ಸೋಮವಾರ ಶಾಲೆಗಳನ್ನು ತೆರೆದಿದೆ. 1 ರಿಂದ 7, 10 ಮತ್ತು 12 ನೇ ತರಗತಿ ವಿದ್ಯಾರ್ಥಿಗಳಿಗೆ ಕೋವಿಡ್ ಪ್ರೋಟೋಕಾಲ್‌ಗಳೊಂದಿಗೆ ಪುನರಾರಂಭ ಮಾಡಲಾಗುತ್ತಿದೆ. ಆರೋಗ್ಯ ಮತ್ತು ಶಿಕ್ಷಣ ಇಲಾಖೆಗಳು ಸಿದ್ಧಪಡಿಸಿರುವ ಮಾರ್ಗಸೂಚಿಗಳನ್ನು ಶಾಲೆಗಳು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಕೇರಳ ಮುಖ್ಯಮಂತ್ರಿ ಹೇಳಿದ್ದಾರೆ.
ತಮಿಳುನಾಡಿನಲ್ಲಿ, 1 ರಿಂದ 8 ನೇ ತರಗತಿಯ ವಿದ್ಯಾರ್ಥಿಗಳಿಗೆ ಸುಮಾರು 20 ತಿಂಗಳ ಅಂತರದ ನಂತರ ತಮ್ಮ ಕ್ಯಾಂಪಸ್‌ಗಳಿಗೆ ಮರಳಲು ಅವಕಾಶ ನೀಡಲಾಗಿದೆ. ವರದಿಗಳ ಪ್ರಕಾರ, ಶಾಲೆಗೆ ತೆರಳದೆ ಮನೆಯಲ್ಲೇ ಇದ್ದ ಮಕ್ಕಳಿಗೆ ಒಮ್ಮೆಲೇ ಓದು ಅಂತಾ ಹೇಳೋದು ಕಷ್ಟವಾಗಬಹುದು. ಹೀಗಾಗಿ ಪ್ರಾಥಮಿಕ ಶಿಕ್ಷಣ ಇಲಾಖೆಯು ಮಕ್ಕಳನ್ನು ಶೈಕ್ಷಣಿಕ ವಾತಾವರಣಕ್ಕೆ ಮರಳಿಸಲು ಮೊದಲ ಎರಡು ವಾರಗಳ ಕಾಲ ಕಥೆ ಹೇಳುವುದು, ಚಿತ್ರಕಲೆ ಮತ್ತು ಇತರ ಸೃಜನಶೀಲ ಅವಧಿಗಳನ್ನು ನಡೆಸಲು ನಿರ್ಧರಿಸಿದೆ ಎಂದು ಹೇಳಲಾಗಿದೆ.
ಸೋಮವಾರ ಬೆಳಗ್ಗೆಯಿಂದಲೇ ಟ್ವಿಟ್ಟರ್ ನಲ್ಲಿ ಮಕ್ಕಳು ಶಾಲೆಗೆ ವಾಪಸ್ಸಾಗುತ್ತಿರುವ ಫೋಟೋಗಳು ಹರಿದಾಡುತ್ತಿವೆ. ಪೋಷಕರು ಮತ್ತು ಶಿಕ್ಷಕರು ಫೋಟೋಗಳನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.