alex Certify ದೂರದರ್ಶನ ಆರಂಭವಾಗಿ 62 ವರ್ಷ: ಅವಿಸ್ಮರಣೀಯ ಕ್ಷಣಗಳ ಮೆಲುಕು ಹಾಕಿದ ವೀಕ್ಷಕರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೂರದರ್ಶನ ಆರಂಭವಾಗಿ 62 ವರ್ಷ: ಅವಿಸ್ಮರಣೀಯ ಕ್ಷಣಗಳ ಮೆಲುಕು ಹಾಕಿದ ವೀಕ್ಷಕರು

ಸರ್ಕಾರಿ ಪ್ರಸಾರ ವಾಹಿನಿ ದೂರದರ್ಶನ ದೇಶವಾಸಿಗಳ ಹೃದಯದಲ್ಲಿ ನೆಲೆಸಿ ಬುಧವಾರಕ್ಕೆ 62 ವರ್ಷಗಳು ತುಂಬಿವೆ.

ಸೆಪ್ಟೆಂಬರ್‌ 15, 1959ರಲ್ಲಿ ಆರಂಭಗೊಂಡ ದೂರದರ್ಶನ, 20ನೇ ಶತಮಾನದ ದ್ವಿತೀಯಾರ್ಧದಲ್ಲಿ ದೇಶವಾಸಿಗಳ ಮನರಂಜನೆ ಹಾಗೂ ಸುದ್ದಿ ಮಾಹಿತಿಯ ಏಕೈಕ ಮೂಲವಾಗಿ ದಶಕಗಳನ್ನು ಹಾದು ಬಂದಿದೆ.

ಮಹಾಭಾರತ, ರಾಮಾಯಣ, ಚಿತ್ರಹಾರ್‌, ಮಾಲ್ಗುಡಿ ಡೇಸ್‌ನಂಥ ಚಿರಸ್ಮರಣೀಯ ಪ್ರದರ್ಶನಗಳಿಂದಾಗಿ ದೂರದರ್ಶನ ವಾಹಿನಿ ನಮ್ಮೆಲ್ಲರ ಜೀವನದ ಒಂದು ಭಾಗವೇ ಆಗಿಬಿಟ್ಟಿದೆ.

ಲಾಕ್‌ಡೌನ್ ಅವಧಿಯಲ್ಲಿ ತನ್ನ ಎವರ್‌ ಗ್ರೀನ್ ಕ್ಲಾಸಿಕ್‌ ಶೋಗಳಾದ ಮಹಾಭಾರತ, ರಾಮಾಯಣ, ಬುನಿಯಾದ್ ಹಾಗೂ ಇನ್ನಿತರ ಕಾರ್ಯಕ್ರಮಗಳ ಮರುಪ್ರಸಾರ ಮಾಡುವ ಮೂಲಕ ದೇಶವಾಸಿಗಳನ್ನು 1980ರ ದಶಕದ ಆ ಸಮೃದ್ಧ ದಿನಗಳಿಗೆ ಮರಳಿ ಕರೆದೊಯ್ದಿದೆ.

ಕೊರೋನಾ ದಾಳಿ ಬಗ್ಗೆ ಶಾಕಿಂಗ್ ಮಾಹಿತಿ ನೀಡಿದ ತಜ್ಞರು: 3 ನೇ ಅಲೆಯಲ್ಲಿ 7 ಪಟ್ಟು ಅಬ್ಬರಿಸಲಿದೆ ಸೋಂಕು, ಮಕ್ಕಳೇ ಟಾರ್ಗೆಟ್

ಈ ಸಂದರ್ಭದಲ್ಲಿ ದೂರದರ್ಶನ ವಾಹಿನಿ ನಡೆದು ಬಂದ ಹಾದಿಯಲ್ಲಿ ಕಿರುತೆರೆಯಲ್ಲಿ ಬಿತ್ತರಗೊಂಡ ಕೆಲವೊಂದು ಸುಂದರ ಕ್ಷಣಗಳನ್ನು ದೂರದರ್ಶನ ತನ್ನ ಟ್ವೀಟರ್‌ ಹ್ಯಾಂಡಲ್‌ ಮೂಲಕ ಶೇರ್‌ ಮಾಡಿಕೊಂಡಿದೆ.

ಈಗಲೂ ತನ್ನದೇ ಆದ ಘನತೆ ಇಟ್ಟುಕೊಂಡಿರುವ ದೂರದರ್ಶನ ಹೊಸ ಹೊಸ ಪ್ರಯೋಗ ಮಾಡುತ್ತಲಿದ್ದು, ಪ್ರಾದೇಶಿಕತೆಗೂ ಒತ್ತುಕೊಟ್ಟಿರುವುದು ವಿಶೇಷ. ತನ್ನ ಸಂಭ್ರಮ ಹಂಚಿಕೊಂಡ ದೂರದರ್ಶನಕ್ಕೆ ಜನರೂ ಸಹ ಜಾಲತಾಣದಲ್ಲಿ ಮೆಚ್ಚುಗೆ ಸೂಚಿಸಿದ್ದಾರೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...