ಕಳೆದ ವರ್ಷ ಕೋವಿಡ್ ಸಾಂಕ್ರಾಮಿಕದ ಕಾರಣಕ್ಕೆ ಹೆಚ್ಚು ಪ್ರಚಲಿತದಲ್ಲಿದ್ದ ಹಾಗೂ ಅತೀ ಬೇಡಿಕೆ ಸೃಷ್ಟಿಸಿಕೊಂಡಿದ್ದು ರೆಮ್ ಡೆಸಿವಿರ್ ಔಷಧ. ತಮ್ಮವರನ್ನು ಉಳಿಸಿಕೊಳ್ಳಲು ಕುಟುಂಬದವರು, ಸ್ನೇಹಿತರು ರೆಮ್ ಡಿಸಿವಿರ್‌ಗಾಗಿ ಸರತಿ ಸಾಲಲ್ಲಿ ದಿನಗಟ್ಟಲೆ ಕಾದ ಉದಾಹರಣೆ ಸಾವಿರಾರು.
ಆದರೆ, ಇಂದು ರೆಮ್ ಡೆಸಿವಿರ್ ಔಷಧ ಕೇಳುವವರಿಲ್ಲದೇ ದೊಡ್ಡ ಪ್ರಮಾಣದಲ್ಲಿ ನಾಶ ಮಾಡುವ ಸನ್ನಿವೇಶ ಸೃಷ್ಟಿಯಾಗಿದೆ. ಅಂದು ಬೇಡಿಕೆ ಹೆಚ್ಚು ಮತ್ತು ಪೂರೈಕೆ ಕಡಿಮೆಯಾದ್ದರಿಂದ, ಔಷಧ ತಯಾರಕರು ಉತ್ಪಾದನೆಯನ್ನು ಹೆಚ್ಚಿಸಿದ್ದರು. ಇದೀಗ ಒಂದು ವರ್ಷದ ನಂತರ 60 ಲಕ್ಷ ರೆಮ್‌ಡೆಸಿವಿರ್ ಬಾಟಲುಗಳು ಅವುಗಳ ಅವಧಿ ಮುಗಿಯುವ ಕಾರಣ ನಾಶ ಮಾಡಬೇಕಾದ ಸ್ಥಿತಿ ಇದೆ.
SHOCKING NEWS: ಕೆರೆಗೆ ಹಾರಿದ ಒಂದೇ ಕುಟುಂಬದ ಮೂವರು ಮಹಿಳೆಯರು; ಒಬ್ಬರು ಸಾವು, ಇಬ್ಬರ ರಕ್ಷಣೆ
ಬಿಡಿಆರ್ ಫಾರ್ಮಾಸ್ಯುಟಿಕಲ್ಸ್‌ನ ಅಧ್ಯಕ್ಷ ಧರ್ಮೇಶ್ ಶಾ ಅವರ ಪ್ರಕಾರ, 800 ಕೋಟಿಯಿಂದ 1,000 ಕೋಟಿ ಮೌಲ್ಯದ ಕೋವಿಡ್ ಸಂಬಂಧಿತ ಔಷಧಿಗಳ ದಾಸ್ತಾನುಗಳು ದೇಶದಲ್ಲಿ ಬಳಕೆಯಾಗದೆ ಉಳಿದಿವೆ. ಈ ಔಷಧಿಗಳಲ್ಲಿ ರೆಮ್‌ಡೆಸಿವಿರ್, ಲಿಪೊಸೋಮಲ್ ಆಂಫೊಟೆರಿಸಿನ್ ಬಿ ಚುಚ್ಚುಮದ್ದು, ಪೊಸಾಕೊನಜೋಲ್ ಮಾತ್ರೆಗಳು ಮತ್ತು ಚುಚ್ಚುಮದ್ದು, ಬಾರಿಸಿಟಿನಿಬ್ ಮಾತ್ರೆಗಳು, ಮೆಲ್ನುಪಿರಾವಿರ್ ಮಾತ್ರೆಗಳು ಮತ್ತು ಫೆವಿಪಿರಾವಿರ್ ಮಾತ್ರೆಗಳು ಸೇರಿವೆ ಎಂದು ಹೇಳಿದ್ದಾರೆ. ಫಾರ್ಮಾ ಕಂಪನಿಗಳು ಈ ನಷ್ಟವನ್ನು ಭರಿಸಬೇಕಾಗುತ್ತದೆ, ಏಕೆಂದರೆ ಬೇರೆ ಆಯ್ಕೆಗಳಿಲ್ಲ ಎಂದು ಧರ್ಮೇಶ್ ತಿಳಿಸಿದ್ದಾರೆ.
ಒಟ್ಟಾರೆಯಾಗಿ 600 ಕೋಟಿ ರೂ. ಮೌಲ್ಯದ ರೆಮೆಡಿಸಿವಿರ್ ಬಾಟಲುಗಳು, 200 ಕೋಟಿ ರೂ. ಮೌಲ್ಯದ ರೆಮೆಡಿಸಿವಿರ್ ಔಷಧೀಯ ಸಾಮಗ್ರಿ, ಮತ್ತು ಇತರ ಕೋವಿಡ್ ಸಂಬಂಧಿತ ಔಷಧಿಗಳ ಮುಕ್ತಾಯ ದಿನಾಂಕವು ಹತ್ತಿರದಲ್ಲಿರುವ ಮಾಹಿತಿ ಡ್ರಗ್ ಕಂಟ್ರೋಲರ್ ಬಳಿ ಇದೆ.
ಬಿಡಿಆರ್ ಫಾರ್ಮಾಸ್ಯುಟಿಕಲ್ಸ್ ಸಿಪ್ಲಾ, ಡಾ ರೆಡ್ಡೀಸ್ ಲ್ಯಾಬೊರೇಟರೀಸ್, ಹೆಟೆರೊ, ಜುಬಿಲೆಂಟ್ ಫಾರ್ಮಾ, ಮೈಲಾನ್, ಸಿಂಜೀನ್ ಮತ್ತು ಝೈಡಸ್ ಲೈಫ್‌ಸೈನ್ಸ್‌ಗಳು ಭಾರತದಲ್ಲಿ ರೆಮೆಡಿಸಿವಿರ್‌ನ ಪ್ರಮುಖ ತಯಾರಕರಾಗಿದ್ದಾರೆ.