ಅಡುಗೆ ಸಿಲಿಂಡರ್ ಬಳಕೆದಾರರಿಗೆ ಖುಷಿ ಸುದ್ದಿಯೊಂದಿದೆ. ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ನ ಗ್ಯಾಸ್ ಕಂಪನಿ ಇಂಡೇನ್ ಗ್ರಾಹಕರ ಕೆಲಸವನ್ನು ಸುಲಭಗೊಳಿಸಿದೆ. ಗ್ರಾಹಕರು ಕೇವಲ ಆಧಾರ್ ಕಾರ್ಡ್ ನೀಡಿ, ಸಿಲಿಂಡರ್ ಪಡೆಯಬಹುದು. ಇದಕ್ಕೆ ಬೇರೆ ಯಾವುದೇ ದಾಖಲೆ ನೀಡುವ ಅಗತ್ಯವಿಲ್ಲ.
ಇಂಡೇನ್ ಈ ನಿಯಮ, ಕೆಲಸದ ಕಾರಣಕ್ಕೆ ಆಗಾಗ ನಗರ ಬದಲಿಸುವು ಜನರಿಗೆ ಅನುಕೂಲವಾಗಲಿದೆ. ಗ್ಯಾಸ್ ಕಂಪನಿಗಳು ಸಂಪರ್ಕ ನೀಡಲು ಅನೇಕ ದಾಖಲೆಗಳನ್ನು ಕೇಳುತ್ತವೆ. ವಿಶೇಷವಾಗಿ ವಿಳಾಸ ಪುರಾವೆ ಕೇಳುತ್ತವೆ. ಎಲ್ಲರಿಗೂ ವಿಳಾಸ ಪುರಾವೆ ಇರುವುದಿಲ್ಲ. ಅಂತವರು ಸಂಪರ್ಕ ಪಡೆಯುವುದು ಕಷ್ಟ. ಆದ್ರೆ ಇಂಡೇನ್ ಈ ನಿಯಮ ಸಿಲಿಂಡರ್ ಪಡೆಯುವುದನ್ನು ಸುಲಭಗೊಳಿಸಿದೆ.
ಆಧಾರ್ ನೀಡಿ, ಸಿಲಿಂಡರ್ ಪಡೆಯುವ ವ್ಯಕ್ತಿಗೆ, ಸಬ್ಸಿಡಿ ರಹಿತ ಸಂಪರ್ಕ ನೀಡಲಾಗುವುದು. ಗ್ರಾಹಕರು ನಂತರ ವಿಳಾಸ ಪುರಾವೆ ಸಲ್ಲಿಸಬಹುದು. ಈ ಪುರಾವೆ ಸಲ್ಲಿಸಿದ ತಕ್ಷಣ, ಸಿಲಿಂಡರ್ ಮೇಲಿನ ಸಬ್ಸಿಡಿಯ ಲಾಭವನ್ನು ನೀಡಲಾಗುತ್ತದೆ.
ಹತ್ತಿರದ ಗ್ಯಾಸ್ ಏಜೆನ್ಸಿಗೆ ಹೋಗಿ, ಅಲ್ಲಿ ಅರ್ಜಿ ಭರ್ತಿ ಮಾಡಬೇಕು. ಆಧಾರ್ ಮಾಹಿತಿ ಭರ್ತಿ ಮಾಡಿ, ಅರ್ಜಿ ಸಲ್ಲಿಸಬೇಕು. ಅರ್ಜಿ ಪರಿಶೀಲನೆ ನಂತ್ರ ತಕ್ಷಣ ಸಂಪರ್ಕ ನೀಡಲಾಗುವುದು. ಆದ್ರೆ ಸಬ್ಸಿಡಿ ಸಿಗುವುದಿಲ್ಲ.