alex Certify ಗಿನ್ನೆಸ್ ದಾಖಲೆಗೆ ಭಾಜನವಾಗಿರುವ ಈ ವಿವರ ಕೇಳಿದ್ರೆ ಬೆರಗಾಗ್ತೀರಾ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಿನ್ನೆಸ್ ದಾಖಲೆಗೆ ಭಾಜನವಾಗಿರುವ ಈ ವಿವರ ಕೇಳಿದ್ರೆ ಬೆರಗಾಗ್ತೀರಾ…!

2021ರ ಡಿಸೆಂಬರ್‌ನ ದಿನಗಳು ಓಡುತ್ತಿದ್ದು, ಹೊಸ ವರ್ಷಕ್ಕೆ ದಿನಗಣನೆಗೆ ಅದಾಗಲೇ ಚಾಲನೆ ಸಿಕ್ಕಿಬಿಟ್ಟಿದೆ. ಇಂಥ ಸಂದರ್ಭದಲ್ಲಿ, ಈ ವರ್ಷ ಗಿನ್ನೆಸ್ ದಾಖಲೆಗೆ ಭಾಜನವಾದ ಕೆಲವು ನಂಬಲಸಾಧ್ಯವಾದ ನಿದರ್ಶನಗಳ ಪಟ್ಟಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ.

ಅತ್ಯಂತ ವೇಗವಾಗಿ ಸರ್ಜಿಕಲ್ ಮಾಸ್ಕ್ ಧಾರಣೆ

ಜಾರ್ಜ್‌ ಪೀಲ್ ಹೆಸರಿನ ಬ್ರಿಟನ್‌ನ ಜಾರ್ಜ್ ಪೀಲ್ ಹೆಸರಿನ ಈ ವ್ಯಕ್ತಿ, ಬರೀ 7.35 ಸೆಕೆಂಡ್‌ಗಳಲ್ಲಿ 10 ಸರ್ಜಿಕಲ್ ಮಾಸ್ಕ್ ಧರಿಸಿ ಗಿನ್ನೆಸ್ ಪುಸ್ತಕ ಪ್ರವೇಶಿಸಿದ್ದಾರೆ.

ಜಗತ್ತಿನ ಅತ್ಯಂತ ಗಿಡ್ಡ ಬಾಡಿ ಬಿಲ್ಡರ್‌

3 ಅಡಿ ನಾಲ್ಕು ಇಂಚು ಉದ್ದವಿರುವ ಭಾರತದ ಪ್ರತೀಕ್ ಮೋಹಿತೆ ಜಗತ್ತಿನ ಅತ್ಯಂತ ಕುಳ್ಳನೆಯ ಬಾಡಿ ಬಿಲ್ಡರ್‌ ಎಂಬ ಗೌರವಕ್ಕೆ ಭಾಜನರಾಗಿದ್ದಾರೆ.

ನಾಲಿಗೆಯಿಂದ ವಿದ್ಯುತ್‌ ಬೀಸಣಿಕೆ ನಿಲ್ಲಿಸುವುದು

ನಾವೆಲ್ಲಾ ನಮ್ಮ ಬಾಲ್ಯದಲ್ಲಿ ವಿದ್ಯುತ್‌ ಫ್ಯಾನ್‌ಗಳ ಬಳಿ ಮಾತನಾಡಿ, ನಮ್ಮ ದನಿ ರೋಬೊಟ್‌ನಂತೆ ಭಾಸವಾಗುತ್ತಿರುವುದನ್ನು ಕಂಡು ಖುಷಿ ಪಡುತ್ತಿದ್ದದ್ದನ್ನು ನೆನಪಿಸುವ ಘಟನೆಯೊಂದರಲ್ಲಿ, ಆಸ್ಟ್ರೇಲಿಯಾದ ಜ಼ೋ ಎಲ್ಲಿಸ್ ಎಂಬ ಮಹಿಳೆ ತನ್ನ ಬಾಯಿಗೆ ತೀರಾ ಸನಿಹದಲ್ಲಿ ಎಲೆಕ್ಟ್ರಿಕ್ ಫ್ಯಾನ್‌ಗಳನ್ನು ತಂದು ಅವುಗಳನ್ನು ನಾಲಿಗೆಯಿಂದ ನಿಲ್ಲಿಸುವ ಮೂಲಕ ನೋಡುಗರಿಗೆ ಮೈ ಜುಂ ಎನ್ನುವಂತೆ ಮಾಡಿದ್ದರು. ಒಂದೇ ಬಾರಿಗೆ ತಮ್ಮ ನಾಲಿಗೆಯಿಂದ 32 ಫ್ಯಾನ್‌ಗಳನ್ನು ನಿಲ್ಲಿಸುವ ಮೂಲಕ ಗಿನ್ನೆಸ್ ದಾಖಲೆಯ ಪುಸ್ತಕ ಸೇರಿದ್ದಾರೆ ಜ಼ೋ.

Guinness World Records - Stopping Fan Blades With The Tongue - Guinness World Records | Facebook

ನೀರಿನಾಳದಲ್ಲಿ ದೀರ್ಘಾವಧಿಗೆ ಉಸಿರು ಹಿಡಿದುಕೊಂಡಿದ್ದು

ನೀವು ಗರಿಷ್ಠ ಎಷ್ಟು ಹೊತ್ತಿನವರೆಗೂ ಉಸಿರನ್ನು ಹಿಡಿದಿಟ್ಟುಕೊಂಡು ಇರಬಲ್ಲಿರಿ? ಕ್ರೋವೇಷ್ಯಾದ 56-ವರ್ಷ ವಯಸ್ಸಿನ ಬುದಿಮಿರ್‌ ಸೋಬತ್‌ ನೀರಿನಾಳದಲ್ಲಿ 24 ನಿಮಿಷ 37 ಸೆಕೆಂಡ್‌ಗಳ ವರೆಗೂ ಉಸಿರು ಹಿಡಿದಿಟ್ಟುಕೊಂಡು, ಈ ಹಿಂದೆ ಮಾಡಿದ್ದ ದಾಖಲೆಯನ್ನು 34 ಸೆಕೆಂಡ್‌ಗಳಿಂದ ಹಿಂದಿಕ್ಕಿದ್ದಾರೆ.

ಜೋರಾದ ತೇಗು

ಆಸ್ಟ್ರೇಲಿಯಾದ ನೆವಿಲ್ಲೆ ಶಾರ್ಪ್ ಹೆಸರಿನ ವ್ಯಕ್ತಿಯೊಬ್ಬರ ತೇಗೊಂದು 112.4 ಡೆಸಿಬಲ್‌ನಷ್ಟು ಶಬ್ದ ಸೃಷ್ಟಿಸಿ, 45-ವರ್ಷದ ಈತನನ್ನು ಗಿನ್ನೆಸ್ ಪುಸ್ತಕದಲ್ಲಿ ಅಡ್ಮಿಟ್ ಮಾಡಿದೆ. ಇದಕ್ಕೂ ಹಿಂದಿನ ದಾಖಲೆಗೆ ಭಾಜನವಾಗಿದ್ದ ತೇಗು 109.9 ಡೆಸಿಬಲ್‌ನಷ್ಟು ಜೋರಾಗಿತ್ತು.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...