ಪೂಜಾಭಟ್, ಹನ್ಸಲ್ ಮೆಹ್ತಾ ಸೇರಿದಂತೆ ವಿವಿಧ ತಾರೆಯರ ಬಳಿಕ ಇದೀಗ ಸುಸೇನ್ ಖಾನ್ ಕೂಡ ಆರ್ಯನ್ ಖಾನ್ ಬಂಧನದ ವಿಚಾರವಾಗಿ ಶಾರೂಕ್ ಖಾನ್ ಹಾಗೂ ಗೌರಿ ಖಾನ್ಗೆ ತಮ್ಮ ಬೆಂಬಲವನ್ನು ಸೂಚಿಸಿದ್ದಾರೆ.
ಇಂಟೀರಿಯರ್ ಡಿಸೈನರ್ ಹಾಗೂ ಹೃತಿಕ್ ರೋಷನ್ ರ ಮಾಜಿ ಪತ್ನಿಯಾಗಿರುವ ಸುಸೇನ್ ಖಾನ್, ಆರ್ಯನ್ ಖಾನ್ ಬಂಧನದ ವಿಚಾರವಾಗಿ ತಮ್ಮ ಅಭಿಪ್ರಾಯವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಡ್ರಗ್ ಕೇಸ್ನ ವಿಚಾರದಲ್ಲಿ ಬಾಲಿವುಡ್ ನ್ನು ಟಾರ್ಗೆಟ್ ಮಾಡಲಾಗ್ತಿದೆ ಎಂದು ಸುಸೇನ್ ಹೇಳಿದ್ದಾರೆ.
ಅಕ್ಟೋಬರ್ 13ರಂದು ‘ಪುಷ್ಪ’ ಸಿನಿಮಾದ ಎರಡನೇ ಹಾಡು ರಿಲೀಸ್
ಪತ್ರಕರ್ತೆ ಶೋಭಾ ಡೇರ ವರದಿಗೆ ಇನ್ಸ್ಟಾಗ್ರಾಂನಲ್ಲಿ ಪ್ರತಿಕ್ರಿಯಿಸಿರುವ ಸುಸೇನ್, ನನ್ನ ಪ್ರಕಾರ ಇದು ಆರ್ಯನ್ ಖಾನ್ ಬಗ್ಗೆ ಅಲ್ಲ. ದುರಾದೃಷ್ಟವಶಾತ್ ಆತ ತಪ್ಪಾದ ಸಮಯದಲ್ಲಿ, ತಪ್ಪಾದ ಸ್ಥಳದಲ್ಲಿ ಇದ್ದನು. ಈ ಪರಿಸ್ಥಿತಿಯನ್ನು ನಾವು ಒಂದು ಉದಾಹರಣೆ ಎಂಬಂತೆ ನೋಡಬಹುದಾಗಿದೆ. ಡ್ರಗ್ ಪ್ರಕರಣದಲ್ಲಿ ಬಾಲಿವುಡ್ ನ್ನು ಬಲಿಪಶು ಮಾಡಲಾಗಿದೆ ಎಂಬುದಕ್ಕೆ ಇದೊಂದು ಉದಾಹರಣೆಯಾಗಿದೆ. ಇದೊಂದು ದುಃಖಕರ ಹಾಗೂ ಅನ್ಯಾಯದ ಸಂಗತಿಯಾಗಿದೆ. ಏಕೆಂದರೆ ಆರ್ಯನ್ ಒಳ್ಳೆಯ ಹುಡುಗ. ನಾನು ಶಾರೂಕ್ ಹಾಗೂ ಗೌರಿ ಖಾನ್ ಪರವಾಗಿದ್ದೇನೆ ಎಂದು ಬರೆದಿದ್ದಾರೆ.
ನಿಮ್ಮ ಪ್ರತಿಯೊಂದು ಚಲನೆ ಟ್ರಾಕ್ ಮಾಡುತ್ತೆ ಗೂಗಲ್: ಇದನ್ನು ತಡೆಗಟ್ಟಲು ಇಲ್ಲಿದೆ ಟಿಪ್ಸ್
ಡ್ರಗ್ ಪ್ರಕರಣದಲ್ಲಿ ಆರ್ಯನ್ ಖಾನ್ ರನ್ನು ಬಂಧಿಸಿರುವ ಎನ್ಸಿಬಿ ಅಕ್ಟೋಬರ್ 7ರವರೆಗೆ ಆರ್ಯನ್ನ್ನು ವಶಕ್ಕೆ ಪಡೆದಿದೆ. ಆರ್ಯನ್ ಖಾನ್ ಬಳಿ ಯಾವುದೇ ಡ್ರಗ್ ಪತ್ತೆಯಾಗಿಲ್ಲ. ಆದರೆ ಹೆಚ್ಚಿನ ತನಿಖೆಗಾಗಿ ಎನ್ಸಿಬಿ ಆರ್ಯನ್ ಖಾನ್ರನ್ನು ವಶಕ್ಕೆ ಪಡೆದಿದೆ.