
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಮುಂದಿನ 10 ದಿನಗಳ ಕಾಲ ಯಾರ ಸಂಪರ್ಕಕ್ಕೂ ಸಿಗುವುದಿಲ್ಲ. ದೂರವಾಣಿ, ಸಾಮಾಜಿಕ ಮಾಧ್ಯಮದ ಜೊತೆ ಅವರ ಕುಟುಂಬ ಸದಸ್ಯರಿಂದಲೂ ದೂರವಿರಲಿದ್ದಾರೆ. ಕೇಜ್ರಿವಾಲ್ ಅವರನ್ನು ಯಾರೂ ಭೇಟಿಯಾಗಲು ಸಾಧ್ಯವಿಲ್ಲ. ಹಾಗೆ ಯಾವುದೇ ಕಾರ್ಯಕ್ರಮದಲ್ಲಿ ಸಿಎಂ ಪಾಲ್ಗೊಳ್ಳುತ್ತಿಲ್ಲ. ಸಿಎಂ 10 ದಿನಗಳ ಧ್ಯಾನ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ. ಜೈಪುರದಲ್ಲಿ ಶಿಬಿರ ನಡೆಯುತ್ತಿದ್ದು, ಕೇಜ್ರಿವಾಲ್ ಧ್ಯಾನದಲ್ಲಿ ಸಮಯ ಕಳೆಯಲಿದ್ದಾರೆ.
ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಕೇಜ್ರಿವಾಲ್ ಅವರನ್ನು ಜೈಪುರಕ್ಕೆ ಸ್ವಾಗತಿಸಿದ್ದಾರೆ. ಸಿಎಂ ಗೆಹ್ಲೋಟ್ ಟ್ವೀಟ್ ಮಾಡಿದ್ದಾರೆ. ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ಸ್ವಾಗತ. ನನ್ನ ಆರೋಗ್ಯದ ಬಗ್ಗೆ ಮಾಹಿತಿ ಪಡೆದು ಶುಭ ಹಾರೈಸಿದ್ದೀರಿ. ಇದಕ್ಕಾಗಿ ಧನ್ಯವಾದಗಳು. ಆರೋಗ್ಯ ವೃದ್ಧಿಗಾಗಿ ರಾಜಸ್ಥಾನವನ್ನು ಆಯ್ಕೆ ಮಾಡಿಕೊಂಡಿದ್ದಕ್ಕೆ ಸಂತೋಷವಾಗಿದೆ. ಆರೋಗ್ಯ ಸುಧಾರಣೆ ಬಯಸುತ್ತೇನೆಂದು ಅವರು ಟ್ವೀಟ್ ಮಾಡಿದ್ದಾರೆ.
ಸಿಎಂ ಕೇಜ್ರಿವಾಲ್, ಮುಂದಿನ ವರ್ಷ ನಡೆಯುವ ಪಂಜಾಬ್, ಉತ್ತರಾಖಂಡ್, ಉತ್ತರ ಪ್ರದೇಶ ಮತ್ತು ಗೋವಾ ವಿಧಾನಸಭಾ ಚುನಾವಣೆಗೆ ಹೆಚ್ಚಿನ ಸಮಯ ನೀಡಲಿದ್ದಾರೆ. ಹಾಗಾಗಿ ಆ ಕೆಲಸಕ್ಕೆ ಈಗ್ಲೇ ದೈಹಿಕವಾಗಿ ಮತ್ತು ಮಾನಸಿಕವಾಗಿ ಸಿದ್ಧಪಡಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.
ಸಿಎಂ ಅರವಿಂದ ಕೇಜ್ರಿವಾಲ್ ಧ್ಯಾನ, ಯೋಗದಲ್ಲಿ ಸಂಪೂರ್ಣ ನಂಬಿಕೆ ಹೊಂದಿದ್ದಾರೆ. ಅನೇಕ ಶಿಬಿರಗಳಲ್ಲಿ ಅವರು ಪಾಲ್ಗೊಂಡಿದ್ದಾರೆ.