ನವದೆಹಲಿ: ದೀಪಾವಳಿ ಕೊಡುಗೆಯಾಗಿ ಗೆಜೆಟೆಡ್ ಅಲ್ಲದ ಎಲ್ಲಾ ಗ್ರೂಪ್ ಬಿ ಮತ್ತು ಗ್ರೂಪ್ ಸಿ ಸರ್ಕಾರಿ ನೌಕರರಿಗೆ 7,000 ರೂ. ಬೋನಸ್ ನೀಡುವುದಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಘೋಷಿಸಿದ್ದಾರೆ.
80,000 ಉದ್ಯೋಗಿಗಳಿಗೆ ದೀಪಾವಳಿ ಬೋನಸ್ ನೀಡಲು ದೆಹಲಿ ಸರ್ಕಾರ 56 ಕೋಟಿ ರೂ. ಮಂಜೂರು ಮಾಡಿದೆ.
ದೆಹಲಿ ಸರ್ಕಾರದ ಗ್ರೂಪ್ ಬಿ ನಾನ್ ಗೆಜೆಟೆಡ್ ಮತ್ತು ಗ್ರೂಪ್ ಸಿ ನೌಕರರಿಗೆ ಬೋನಸ್ ಆಗಿ 7,000 ರೂ. ನೀಡುತ್ತೇವೆ. ಪ್ರಸ್ತುತ, ಸುಮಾರು 80,000 ಗ್ರೂಪ್ ಬಿ ನಾನ್ ಗೆಜೆಟೆಡ್ ಮತ್ತು ಗ್ರೂಪ್ ಸಿ ನೌಕರರು ದೆಹಲಿ ಸರ್ಕಾರದೊಂದಿಗೆ ಕೆಲಸ ಮಾಡುತ್ತಿದ್ದಾರೆ. ಈ ಬೋನಸ್ ಒದಗಿಸಲು ಒಟ್ಟು 56 ಕೋಟಿ ರೂ. ವ್ಯಯಿಸಲಾಗುವುದು ಎಂದು ಹೇಳಿದ್ದಾರೆ.