ಎಲ್ಲರನ್ನೂ ರೋಡಿಗೆ ತರುತ್ತೇನೆ ಎಂದು ದರ್ಶನ್ ಹೆಸರಲ್ಲಿ ಯತ್ನ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಸರು ಕೇಳಿ ಬಂದಿದ್ದ ಮಹಿಳೆ ಅರುಣಾಕುಮಾರಿ ಹೇಳಿದ್ದಾರೆ.
ಎಲ್ಲರ ಹೆಸರನ್ನು ಬರೆದಿಟ್ಟು ಸಾರ್ವಜನಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ. ನಾಗವರ್ಧನ್ ಎಂಬಾತ ಇಷ್ಟು ವರ್ಷಗಳ ಕಾಲ ತನಗಾದ ಮೋಸದ ಬಗ್ಗೆ ಏಕೆ ಹೇಳಿಕೊಳ್ಳಲಿಲ್ಲ. ಪ್ರತಿಯೊಬ್ಬರ ವಿರುದ್ಧವೂ ನಾನು ಕೇಳುತ್ತೇನೆ. ನಾನು ಒಂಟಿಯಾಗಿದ್ದೇನೆ ಎಂದು ಕಿರುಕುಳ ನೀಡುತ್ತಿದ್ದಾರೆ. ನನಗೆ ಯಾವುದೇ ಬ್ಯಾಗ್ರೌಂಡ್ ಇಲ್ಲ ನಾನು ಯಾರಿಂದಲೂ ಹಣ ಪಡೆದುಕೊಂಡಿಲ್ಲ. ಫೇಸ್ಬುಕ್ ಫ್ರೆಂಡ್ ನಂಬಿ 6 ಲಕ್ಷ ರೂಪಾಯಿ ಒಡವೆ ಯಾರು ಕೊಡುತ್ತಾರೆ. ಇಷ್ಟು ದಿನ ಉದ್ಯಮಿ ನಾಗವರ್ಧನ್ ಏನು ಮಾಡುತ್ತಿದ್ದರು. ಎಲ್ಲರನ್ನೂ ಹೊರಗೆ ಎಳೆಯುತ್ತೇನೆ ಎಂದು ಹೇಳಿದ್ದಾರೆ.
ನಾನು ಮಿಡ್ಲ್ ಕ್ಲಾಸ್ ಮಹಿಳೆ. ಉಮಾಪತಿಯವರೇ ಇದಕ್ಕೆಲ್ಲ ಕಾರಣ. ತಾಜ್ ವೆಸ್ಟೆಂಡ್ ಗೆ ಕರೆದು ಮಾತಾಡಿದ್ದೇ ಅವರು. ದರ್ಶನ್ ಸರ್ ಬಗ್ಗೆ ನಾನು ಕೆಟ್ಟದ್ದಾಗಿ ಮಾತಾಡಿಲ್ಲ. ಅವರೇ ಮಾತಾಡಿದ್ದಾರೆ. ಟಿವಿಯವರು ನನಗೆ ಅನ್ನ ಹಾಕ್ತಿರಾ? ಅವರು ಹೇಳಿದ್ದೇ ಸರಿ ಎಂದಾದರೆ. ನಾನು ಹೇಳಿದ್ದೇಕೆ ಬೆಲೆ ಇಲ್ವಾ?. ಉಮಾಪತಿ ಅವರೇ ಹೇಳಿರುವಂತೆ ಹರ್ಷಾ ಎಂಬುವವರು ದರ್ಶನ್ ಗೆ ಮೋಸ ಮಾಡಲು ಮುಂದಾಗಿದ್ದರು. ದರ್ಶನ್, ಉಮಾಪತಿ, ಹರ್ಷಾ ಅವರಿಂದ ನನಗೇನೂ ಒಂದು ರೂಪಾಯಿ ಬಂದಿಲ್ಲ. ನಾನು ಏಕಾಂಗಿ ಎಂದು ಆಟವಾಡಿಸುತ್ತಿದ್ದಾರೆ. ನನ್ನನ್ನು ರೋಡಿಗೆ ತಂದವರನ್ನೆಲ್ಲಾ ನಾನು ರೋಡಿಗೆ ತರುತ್ತೇನೆ. ಫೇಸ್ ಬುಕ್ ನಲ್ಲಿ ಪರಿಚಯವಾದವರಿಗೆಲ್ಲ ನಾಗವರ್ಧನ್ ರಕ್ಷಣೆ ಕೊಡ್ತಾನಾ ಎಂದು ಪ್ರಶ್ನಿಸಿದ್ದಾರೆ.
ನನಗೆ ಅವಕಾಶ ನೀಡದೇ ನೀವೇ ಏಕಾಏಕಿ ಆರೋಪಿ, ಅಲಲಾ ಅರುಣಾಕುಮಾರಿ ಎಂದೆಲ್ಲಾ ತೋರಿಸಲಾಗ್ತಿದೆ ಎಂದು ಕಿಡಿಕಾರಿದ್ದಾರೆ. ನನ್ನನ್ನು ಬಳಸಿಕೊಂಡು ಟಿಶ್ಯೂ ಪೇಪರ್ ಥರ ಬಿಸಾಕಿದ್ದಾರೆ. ನನ್ನ ಗಂಡ ಎಂದು ಹೇಳಿಕೊಂಡ ವ್ಯಕ್ತಿ ಲಾಕ್ ಮಾಡಿ ಅವನೇ ಉತ್ತರ ಕೊಡ್ತಾನೆ. ನನ್ನ ಮೈಮಾರಿಸಸುವಂತಹ ಕೆಲಸ ಮಾಡಿದ್ದೇ ಕುಮಾರ್. ನಾನು ತಂದೆ, ತಾಯಿ ಜೊತೆ ಇದ್ದೆ. 12 ವರ್ಷದ ಮಗು ಇದೆ. ನಾನು ಐಡಿ ಕಾರ್ಡ್ ಮಾಡಿಸಿಲ್ಲ. ಅವರೇ ಮಾಡಿಸಿದ್ದಾರೆ. ಇಡೀ ಪ್ರಕರಣಕ್ಕೆ ಉಮಾಪತಿ ಅವರೇ ಕಾರಣ ಎಂದು ದೂರಿದ್ದಾರೆ.