ಈ ವರ್ಷ ಬ್ರಿಟನ್ ನ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತೀಯ ಕ್ರೀಡಾಪಟುಗಳ ಅಮೋಘ ಪ್ರದರ್ಶನವನ್ನು ನೀಡಿದ್ದಾರೆ. ಹಲವಾರು ಪದಕಗಳನ್ನು ಜಯಿಸುವುದರ ಮೂಲಕ ನಮ್ಮ ಕ್ರೀಡಾಪಟುಗಳು ದೇಶಕ್ಕೆ ಹೆಮ್ಮೆ ತಂದಿದ್ದಾರೆ. ಸೋಮವಾರದಂದು ನಡೆದ ಸಮಾರೋಪ ಸಮಾರಂಭದಲ್ಲಿ ನಮ್ಮ ಸುವರ್ಣ ಸಂಸ್ಕೃತಿಯನ್ನು ಪ್ರತಿನಿಧಿಸಿದ್ದಾರೆ.
ಹೌದು, ಕಲಾವಿದರು ತಮಿಳುನಾಡಿನ ದಪ್ಪಂಕುತ್ತು ಎಂಬ ಜಾನಪದ ನೃತ್ಯವನ್ನು ಪ್ರದರ್ಶಿಸಿದ್ದಾರೆ. ಇದೀಗ ವೈರಲ್ ಆಗಿರುವ ವಿಡಿಯೋವನ್ನು ಮಿಥುಜಾ ಎಂಬ ಡ್ಯಾನ್ಸರ್ ಹಂಚಿಕೊಂಡಿದ್ದಾರೆ. ಅವರು ಉಷಾ ಜೇ ಮತ್ತು ಜನುಷಾ ಅವರೊಂದಿಗೆ ಜಾನಪದ ನೃತ್ಯ ದಪ್ಪಂಕುತ್ತುವನ್ನು ಪ್ರದರ್ಶಿಸಿದ್ದಾರೆ. ಸಾದಾ ಬಿಳಿ ಕುರ್ತಾ ಗಳನ್ನು ಧರಿಸಿದ್ದ ನೃತ್ಯಗಾತಿಯರು, ತಮಿಳುಹಾಡಿನ ದಿಯಾ ದಿಯಾ ಡೋಲ್‌ಗೆ ಅದ್ಭುತ ಪ್ರದರ್ಶನ ನೀಡಿದ್ದಾರೆ.
ಅಂದಹಾಗೆ, ಕುತ್ತು ಒಂದು ನೃತ್ಯ ಪ್ರಕಾರವಾಗಿದ್ದು, ತಾಳವಾದ್ಯಕ್ಕೆ ಒತ್ತು ನೀಡುತ್ತದೆ. ಈ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, 6 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳು ಮತ್ತು ನೆಟ್ಟಿಗರಿಂದ ಟನ್ ಗಳಷ್ಟು ಪ್ರತಿಕ್ರಿಯೆಗಳು ಬಂದಿವೆ.