
ಇತ್ತೀಚಿನ ದಿನಗಳಲ್ಲಿ ಕಲಾವಿದರು ಕೃತಕ ಬುದ್ಧಿಮತ್ತೆ ಮತ್ತು ಫೋಟೋಶಾಪ್ ಬಳಸಿ ಹಲವಾರು ರೀತಿಯ ಕಲಾತ್ಮಕ ಚಿತ್ರಗಳನ್ನು ರಚನೆ ಮಾಡುತ್ತಿದ್ದಾರೆ. ಈಗ ಅಂಥದ್ದೇ ಒಂದು ವಿಡಿಯೋ ವೈರಲ್ ಆಗಿದೆ.
ಜೋಸ್ ಆಂಟೋನಿಯೊ ಸಲಿಬಾ ಎನ್ನುವವರು ನಟಿ ಪ್ರಿಯಾಂಕಾ ಚೋಪ್ರಾ ಅವರ ಪುರುಷ ಆವೃತ್ತಿಯನ್ನು ರಚಿಸಲು ಫೋಟೋಶಾಪ್ ಅನ್ನು ಬಳಸಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಳ್ಳಲಾದ ವೀಡಿಯೊದಲ್ಲಿ ಪ್ರಿಯಾಂಕಾ ಪುರುಷನಾಗಿ ಪರಿವರ್ತನೆಗೊಳ್ಳುವುದನ್ನು ನೋಡಬಹುದು.
ಕಲಾವಿದ ಅಡೋಬ್ ಫೋಟೋಶಾಪ್ನಲ್ಲಿ ಲಿಕ್ವಿಫೈ ಟೂಲ್ ಅನ್ನು ಬಳಸಿ ಈ ಕಲಾಕೃತಿ ರಚಿಸಿದ್ದಾರೆ. “ಪ್ರಿಯಾಂಕಾ ಚೋಪ್ರಾ ಒಬ್ಬ ಪುರುಷನಂತೆ !” ಎಂದು ಅವರು ವೀಡಿಯೊಗೆ ಸರಳವಾಗಿ ಶೀರ್ಷಿಕೆ ನೀಡಿದ್ದಾರೆ. ಕಲಾವಿದ ನಟಿಯ ಚಿತ್ರವನ್ನು ಎಡಿಟ್ ಮಾಡುವುದನ್ನು ತೋರಿಸುವ ಮೂಲಕ ವಿಡಿಯೋ ಶುರುವಾಗುತ್ತದೆ. ಮೊದಲು ನಟಿಯ ಕಣ್ಣುಗಳನ್ನು ಕಿರಿದಾಗಿಸಿ, ಕೂದಲನ್ನು ಕೆಳಗಿಳಿಸಿ, ಮತ್ತು ಮೀಸೆ ಸೇರಿಸಿ ಅವರು ಫಿಲ್ಟರ್ನಿಂದ ಹೊಸ ಕೇಶವಿನ್ಯಾಸವನ್ನು ನೀಡುವುದನ್ನು ನೋಡಬಹುದು.