ಇತ್ತೀಚೆಗೆ ಆಪ್ಟಿಕಲ್ ಭ್ರಮೆಗಳು ಇಂಟರ್ನೆಟ್ ನಲ್ಲಿ ಬಿರುಗಾಳಿ ಎಬ್ಬಿಸಿವೆ. ಅವುಗಳಲ್ಲಿ ಹೆಚ್ಚಿನವು ಆನ್ಲೈನ್ ನಲ್ಲಿ ಭಾರಿ ವೈರಲ್ ಆಗಿದೆ. ಇದೀಗ ಟ್ವಿಟ್ಟರ್‌ನಲ್ಲಿ ಗೇಬ್ರಿಯೆಲ್ ಕಾರ್ನೊ ಅವರು ಹಂಚಿಕೊಂಡ ವಿಡಿಯೋದಲ್ಲಿ, ಒಬ್ಬ ಕಲಾವಿದ ಮರದ ಮೇಲೆ ಅದ್ಭುತವಾದ 3-ಡಿ ಪೇಂಟಿಂಗ್ ಮಾಡುವುದನ್ನು ಕಾಣಬಹುದು. ಈ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, 2 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳು ಗಳಿಸಿದ್ದು, ನೆಟ್ಟಿಗರು ಬೆರಗಾಗಿದ್ದಾರೆ.
ಈಗ ವೈರಲ್ ಆಗಿರುವ ವಿಡಿಯೋವನ್ನು ಗೇಬ್ರಿಯೆಲ್ ಕಾರ್ನೊ ಅವರು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ, ವ್ಯಕ್ತಿಯೊಬ್ಬರು ಮರದ ಮೇಲೆ ಅಂಟಿಸಿರುವ ಕಾಗದದ ಮೇಲೆ ಚಿತ್ರಿಸುತ್ತಿರುವುದನ್ನು ಕಾಣಬಹುದು. ಅವರು ಚೆಂಡಿನ ಮೇಲೆ ತಿರುಗುತ್ತಿರುವ ಯುವತಿಯ ವರ್ಣಚಿತ್ರವನ್ನು ಚಿತ್ರಿಸಲು ಪ್ರಾರಂಭಿಸಿದರು. ಅಂತಿಮ ಫಲಿತಾಂಶ ಮನಸ್ಸಿಗೆ ಮುದ ನೀಡುವಂತಿತ್ತು.
ಹೌದು, ಕಲಾವಿದನೊಬ್ಬ ತನ್ನ ಅಸಾಮಾನ್ಯ 3ಡಿ ಚಿತ್ರಕಲೆಯಿಂದ ಭಾರಿ ಖ್ಯಾತಿ ಪಡೆದಿದ್ದಾನೆ. ಕಲಾವಿದನ ಪ್ರತಿಭೆ ಮತ್ತು ಆಪ್ಟಿಕಲ್ ಇಲ್ಯೂಷನ್ ಪರಿಣಾಮದಿಂದಾಗಿ ಚಿತ್ರಕಲೆ ಸಂಪೂರ್ಣವಾಗಿ ನೈಜವಾಗಿ ಕಾಣುತ್ತದೆ ಎಂದು ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ. ಕಲಾವಿದ ತಮ್ಮ ಪ್ರತಿಭೆಯಿಂದ ವಿಸ್ಮಯಗೊಳಿಸಿದ್ದಾರೆ ಎಂದೆಲ್ಲಾ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ.