ಅಯೋಧ್ಯಾ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯ ಅಂತಿಮ ಘಟ್ಟಕ್ಕೆ ಬಂದು ನಿಂತಿದ್ದು, ರಾಮ ಮಂದಿರ ಉದ್ಘಾಟನೆಗೆ ದಿನಗಣನೆ ಆರಂಭವಾಗಿದೆ. ರಾಮಮಂದಿರದಲ್ಲಿ ಭರ್ಜರಿ ಸಿದ್ದತೆ ನಡೆಯುತ್ತಿದೆ.
ರಾಮ ಮಂದಿರ ಉದ್ಘಾಟನೆಗೆ ಮುಂಚಿತವಾಗಿ ವಜ್ರದ ವ್ಯಾಪಾರಿಯೊಬ್ಬರು ರಾಮ ಮಂದಿರ ಮಾದರಿಯ ಹಾರವನ್ನು ತಯಾರಿಸಿದ್ದಾರೆ. ಈ ಹಾರವನ್ನು 5,000 ಅಮೆರಿಕನ್ ವಜ್ರಗಳು ಮತ್ತು ಎರಡು ಕೆಜಿ ಬೆಳ್ಳಿಯನ್ನು ಬಳಸಿ ತಯಾರಿಸಲಾಗಿದೆ. ಈ ಹಾರ ಸೋಶಿಯಲ್ ಮೀಡಿಯಾದಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ.
ಒಟ್ಟು 40 ಕುಶಲಕರ್ಮಿಗಳು 35 ದಿನಗಳ ಅವಧಿಯಲ್ಲಿ ಈ ಹಾರವನ್ನು ರಚಿಸಿದ್ದಾರೆ. ಈ ಹಾರವು ಭಗವಾನ್ ರಾಮ, ಸೀತಾ ದೇವಿ, ಭಗವಾನ್ ಲಕ್ಷ್ಮಣ ಮತ್ತು ಭಗವಾನ್ ಹನುಮಾನ್ ಅವರ ಶಿಲ್ಪಗಳನ್ನು ಹೊಂದಿದೆ. ಇದು ರಾಜಮನೆತನದ ಆಸ್ಥಾನವನ್ನು ಸಹ ಪ್ರದರ್ಶಿಸುತ್ತದೆ. ಹಾರದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
“ಈ ಹಾರವನ್ನು ಯಾವುದೇ ವಾಣಿಜ್ಯ ಉದ್ದೇಶಕ್ಕಾಗಿ ಬಳಸಿಲ್ಲ… ನಾವು ಅದನ್ನು ರಾಮ ಮಂದಿರಕ್ಕೆ ಉಡುಗೊರೆಯಾಗಿ ನೀಡಲು ಬಯಸಿದ್ದೆವು” ಎಂದು ವಜ್ರದ ವ್ಯಾಪಾರಿ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ. ಜನವರಿಯಲ್ಲಿ ನಡೆಯಲಿರುವ ರಾಮ ಮಂದಿರದ ಉದ್ಘಾಟನೆಗೆ ಸುಮಾರು ಒಂದು ತಿಂಗಳ ಮೊದಲು ಈ ಹಾರ ಎಲ್ಲರ ಗಮನ ಸೆಳೆಯುತ್ತಿದೆ.