ಈ ಸೆಲೆಬ್ರಿಟಿಗಳು ಸುದ್ದಿ ಮಾಡುವುದು, ವಿವಾದ ಸೃಷ್ಟಿಸುವುದು ಎಲ್ಲೆಲ್ಲೂ ಸರ್ವೇ ಸಾಮಾನ್ಯ. ಪ್ರತಿ ವರ್ಷ ಗಣೇಶೋತ್ಸವದ ಸಂದರ್ಭದಲ್ಲೂ ಈ ಟ್ರೆಂಡ್ ತಪ್ಪೋದಿಲ್ಲ ನೋಡಿ.
ಗಣೇಶ ಚತುರ್ಥಿಗೆ ಶುಭಾಶಯ ಕೋರಿದ ತಮಗೆ ಆನ್ಲೈನ್ನಲ್ಲಿ ಟ್ರೋಲ್ಗಳ ಕಾಟ ಹೆಚ್ಚಾಗಿದೆ ಎಂದು ನಟಿ ಆರ್ಶಿ ಖಾನ್ ಹೇಳಿದ್ದಾರೆ.
“ಭಾರತದಲ್ಲಿ ನಾವು ಪ್ರತಿ ಹಬ್ಬವನ್ನೂ ಸಂಭ್ರಮದಿಂದ ಆಚರಿಸುತ್ತೇವೆ. ಈದ್ ಸಂದರ್ಭದಲ್ಲಿ ನನ್ನ ಹಿಂದೂ ಗೆಳೆಯರು ನನ್ನೊಂದಿಗೆ ಕೂಡಿದರೆ ನಾನು ಗಣಪತಿ, ದೀಪಾವಳಿ ಹಬ್ಬಗಳನ್ನು ಅವರೊಂದಿಗೆ ಆಚರಿಸುತ್ತೇನೆ. ಆದರೆ ಗಣಪತಿ ಹಬ್ಬದ ಆಚರಣೆ ಮಾಡುತ್ತಾ ನನ್ನ ಚಿತ್ರಗಳನ್ನು ಪೋಸ್ಟ್ ಮಾಡುತ್ತಲೇ ಜನರು ಅದನ್ನು ವಿರೋಧಿಸಿದ್ದಾರೆ. ನಾನು ಇದನ್ನು ಪ್ರಚಾರಕ್ಕಾಗಿ ಮಾಡುತ್ತಿದ್ದೇನೆ ಎಂದು ಕೆಲವರು ಹೇಳಿದರೆ, ಇನ್ನಷ್ಟು ಮಂದಿ ಇದು ನನ್ನ ಹಬ್ಬ ಅಲ್ಲವೆಂದರು. ನನಗೆ ಅಕ್ಷರಶಃ ಶಾಕ್ ಆಯಿತು,” ಎಂದು ಖಾನ್ ಹೇಳಿಕೊಂಡಿದ್ದಾರೆ.
ಬ್ರಾದಲ್ಲೇ ಹಲ್ಲಿ ಇದ್ರೂ ಗೊತ್ತಾಗಲಿಲ್ಲ…! 4000 ಮೈಲಿ ದೂರದ ಜರ್ನಿ ನಂತ್ರ ಕಾಣ್ತು ಮಹಿಳೆಯ ಬ್ರಾದಲ್ಲಿ ಅಡಗಿದ್ದ ಹಲ್ಲಿ
ಇನ್ಸ್ಟಾಗ್ರಾಂನಲ್ಲಿ ವಿಡಿಯೋವೊಂದರ ಮೂಲಕ ಕಾಣಿಸಿಕೊಂಡ ಖಾನ್, “ಧರ್ಮಗಳ ಹೆಸರಿನಲ್ಲಿ ಜನರ ನಡುವೆ ದ್ವೇಷ ಬಿತ್ತುವ ಮಂದಿ ಯಾವುದೇ ಧರ್ಮಕ್ಕೂ ಸೇರುವುದಿಲ್ಲ. ಅವರು ಯಾವುದೇ ದೇವರನ್ನು ಪೂಜಿಸುವುದಿಲ್ಲ,” ಎಂದಿದ್ದಾರೆ.
ಕಿರಿತೆರೆಯ ರಿಯಾಲಿಟಿ ಶೋ ಬಿಗ್ ಬಾಸ್ನ ಸ್ಫರ್ಧಿಯಾದ ಅರ್ಶಿ ಖಾನ್, ಬಾಲಿವುಡ್ನ ಮುಂಬರುವ ಚಿತ್ರ ’ತ್ರಾಹಿಮಾಮ್’ನಲ್ಲಿ ನಟಿಸಲಿದ್ದಾರೆ.
https://www.youtube.com/shorts/EKqr0dKbmOg
https://www.instagram.com/p/CTpilOQIuKj/?utm_source=ig_web_copy_link