ಟ್ಯಾಕ್ಸಿ ಸೇವೆಗಳಿಗೆ ಹೇಳಿ ಮಾಡಿಸಿದ ಎಲೆಕ್ಟ್ರಿಕ್ ಕಾರೊಂದನ್ನು ಅರೈವಲ್ ಕಂಪನಿ ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಸಾರಿಗೆ ಸೇವೆಗಳಿಗಿಂದೇ ಬಳಸಬಹುದಾದ ಈ ಕಾರಿನ ಪ್ರೋಟೋಟೈಪ್ ಅನ್ನು ಅರೈವಲ್ ಬಹಿರಂಗ ಪಡಿಸಿದೆ.
ಇನ್ನೂ ಹೆಸರಿಡದ ಈ ಕಾರನ್ನು ಅರೈವಲ್ ತನ್ನ ವ್ಯಾನ್ ಮತ್ತು ಬಸ್ಸುಗಳಲ್ಲಿ ಬಳಸುವ ತಂತ್ರಜ್ಞಾನದಿಂದ ಅಭಿವೃದ್ಧಿಪಡಿಸಿದೆ. ಕಾರಿನ ಮಾದರಿಯನ್ನು ಆರು ತಿಂಗಳಲ್ಲಿ ಅಭಿವೃದ್ಧಿಪಡಿಸಲಾಗಿದೆ. ಟ್ಯಾಕ್ಸಿ ಸೇವಾದಾರ ಊಬರ್ ಚಾಲಕರೊಂದಿಗೆ ಕೆಲಸ ಮಾಡಿದ ಅರೈವಲ್, ಅವರಿಗೆ ಸರಿಹೊಂದುವಂತೆ ಕಾರನ್ನು ಅಭಿವೃದ್ಧಿಪಡಿಸಿದೆ.
ಮಾರುಕಟ್ಟೆಗೆ ಹೋಗಿದ್ದ ಅಪ್ರಾಪ್ತೆ ಮೇಲೆ ಗ್ಯಾಂಗ್ ರೇಪ್
ದೊಡ್ಡದಾದ ವಿಂಡ್ಶೀಲ್ಡ್, ಹೊರಾಂಗಣ ವಿನ್ಯಾಸಗಳನ್ನು ಹೊಂದಿರುವ ಅರೈವಲ್ ಕಾರು ಪಾರದರ್ಶಕ ಛಾವಣಿ ಹೊಂದಿದೆ. ಸರಾಸರಿ ಕಾರಿನಲ್ಲಿ ಕೊಡುವ ಎರಡರಷ್ಟು ಲೆಗ್ ರೂಂ ಅನ್ನು ಅರೈವಲ್ ಕಾರಿನಲ್ಲಿ ನೀಡಲಾಗಿದೆ.
ರೈಡ್ ಶೇರಿಂಗ್ ಸೇವೆಗಳಿಗೆಂದೇ ವಿನ್ಯಾಸಗೊಳಿಸಿದ ಈ ಕಾರಿನಲ್ಲಿ; ಚಾಲಕರ ಆರಾಮ, ಸುರಕ್ಷತೆ, ಅನುಕೂಲತೆಗಳಿಗೆ ಒತ್ತು ನೀಡಲಾಗಿದೆ ಎಂದು ಅರೈವಲ್ ತಿಳಿಸಿದೆ. ಕಾರಿನ ಪವರ್ಟ್ರೇನ್ ಅಥವಾ ಬ್ಯಾಟರಿ ಕುರಿತಂತೆ ಅರೈವಲ್ ಯಾವುದೇ ಮಾಹಿತಿ ಬಿಡುಗಡೆ ಮಾಡಿಲ್ಲ.