alex Certify ಮಂಗಳೂರು ವಿಮಾನ ನಿಲ್ದಾಣದಿಂದ ಸಂಚರಿಸುವವರಿಗೆ ಶಾಕಿಂಗ್‌ ಸುದ್ದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಂಗಳೂರು ವಿಮಾನ ನಿಲ್ದಾಣದಿಂದ ಸಂಚರಿಸುವವರಿಗೆ ಶಾಕಿಂಗ್‌ ಸುದ್ದಿ

ಅದಾನಿ ಏರ್​ಪೋರ್ಟ್ಸ್​ ಒಡೆತನದ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು (ಎಂಐಎ) ದೇಶೀಯ ಬಳಕೆದಾರ ಅಭಿವೃದ್ಧಿ ಶುಲ್ಕವನ್ನು ತಕ್ಷಣವೇ 100 ರೂಪಾಯಿ ಹೆಚ್ಚಿಸುವಂತೆ ಸರ್ಕಾರವನ್ನು ಕೋರಿದೆ.

ಅಭಿವೃದ್ಧಿ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಪ್ರಯಾಣಿಕರಿಂದ ಅರೈವಲ್​- ಡಿಪಾರ್ಚರ್​ ಶುಲ್ಕ ವಿಧಿಸಲು ಅನುಮತಿ ಬಯಸಿದೆ.

ವಿಮಾನ ನಿಲ್ದಾಣವು ತನ್ನ ಇತ್ತೀಚಿನ ಲೆವಿರೂಪದಲ್ಲಿ ಈ ಅಕ್ಟೋಬರ್​ನಿಂದ ದೇಶೀಯ ಪ್ರಯಾಣಿಕರಿಗೆ 250 ರೂಪಾಯಿಗಳ ಶುಲ್ಕ ವಿಧಿಸಲು ಪ್ರಯತ್ನಿಸಿದೆ ಮತ್ತು 2026ರಲ್ಲಿ ಕ್ರಮೇಣ ಅದನ್ನು 725 ರೂ.ಗೆ ಮುಟ್ಟಲಿದೆ.

ಭಾರತೀಯ ವಿಮಾನ ನಿಲ್ದಾಣಗಳ ಆರ್ಥಿಕ ನಿಯಂತ್ರಣ ಪ್ರಾಧಿಕಾರವು ಶುಲ್ಕ ನಿಗದಿ ಮಾಡುವ ಸಂಸ್ಥೆಯಾಗಿದ್ದು, ಮಂಗಳೂರು ವಿಮಾನ ನಿಲ್ದಾಣದ ಶುಲ್ಕ ನಿಗದಿಪಡಿಸುವ ಪ್ರಕ್ರಿಯೆಯಲ್ಲಿದೆ.

ಏಪ್ರಿಲ್​ 1, 2021ರಿಂದ ಮಾರ್ಚ್​ 31, 2026ರ ಅವಧಿಯಲ್ಲಿ ಅಂತರಾಷ್ಟ್ರೀಯ ಪ್ರಯಾಣಿಕರಿಗೆ 525 ರೂಪಾಯಿಗಳಿಂದ 1,200 ರೂಪಾಯಿಗಳಿಗೆ ಶುಲ್ಕ ಹೆಚ್ಚಿಸಲು ಪ್ರಯತ್ನಿಸಿದೆ.

ಅದಾನಿ ಗ್ರೂಪ್​ ಅಕ್ಟೋಬರ್​ 31, 2020ರಂದು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಯಾಚರಣೆಯನ್ನು ವಹಿಸಿಕೊಂಡಿದೆ.

2010ರಿಂದ ಯಾವುದೇ ಶುಲ್ಕ ಪರಿಷ್ಕರಣೆ ನಡೆದಿಲ್ಲ ಎಂದು ವಿಮಾನ ನಿಲ್ದಾಣ ಹೇಳಿದೆ. ವಿಮಾನ ನಿಲ್ದಾಣದ ಆಧುನೀಕರಣ ಯೋಜನೆ ಕೂಡ ನಡೆಯುತ್ತಿದೆ. ಈ ಪರಿಗಣನೆಗಳ ಪರಿಣಾಮವು ಶುಲ್ಕದ ಮೇಲೆ ಪರಿಣಾಮ ಬೀರುತ್ತದೆ ಎಂದು ಅದು ಹೇಳಿದೆ.

ರನ್​ವೇಯ ರಿಕಾರ್ಪೆಟಿಂಗ್​ ಮತ್ತು ಹೊಸ ಟರ್ಮಿನಲ್ ಕಟ್ಟಡ ಮತ್ತು ಕಾರ್ಗೋ ಟರ್ಮಿನಲ್ ನಿರ್ಮಾಣ ಸೇರಿದಂತೆ ಪ್ರಸ್ತಾವಿತ ಅಭಿವೃದ್ಧಿ ಯೋಜನೆಗಳಿಗೆ ಸುಮಾರು 5,200 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...