ಬೆಂಗಳೂರು: ಸ್ನೇಹಿತೆಯ ಮನೆಯಲ್ಲಿ ಚಿನ್ನಾಭರಣ ಕಳವು ಮಾಡಿದ್ದ ಮಹಿಳೆಯನ್ನು ಹುಳಿಮಾವು ಠಾಣೆ ಪೊಲೀಸರು ಬಂಧಿಸಿದ್ದಾರೆ.
ಸೈದಾ ಬಾನು ಬಂಧಿತ ಮಹಿಳೆ. ಆರೋಪಿಯಿಂದ 9 ಲಕ್ಷ ರೂಪಾಯಿ ಮೌಲ್ಯದ 136 ಗ್ರಾಂ ಚಿನ್ನಾಭರಣ ಜ್ಯಪ್ತಿ ಮಾಡಲಾಗಿದೆ. ಶೌಚಕ್ಕೆ ಹೋಗುವ ನೆಪದಲ್ಲಿ ಕಿರಾಣಿ ಅಂಗಡಿ ಮಾಲೀಕಳ ಮನೆಯಲ್ಲಿ ಆಕೆಯ ಸ್ನೇಹಿತೆ ಹುಳಿಮಾವು ಸಮೀಪದ ನಿವಾಸಿ ಸೈದಾ ಕಳವು ಮಾಡಿದ್ದರು.
ಗೊಟ್ಟಿಕೆರೆಯಲ್ಲಿ ಕಿರಾಣಿ ಹೊಂದಿರುವ ಮಹಿಳೆ ಅಂಗಡಿ ಸಮೀಪದಲ್ಲಿ ಏಕಾಂಗಿಯಾಗಿ ವಾಸವಾಗಿದ್ದಾರೆ. ಅನೇಕ ದಿನಗಳಿಂದ ಸೈದಾ ಬಾನು ಜೊತೆಗೆ ಗೆಳೆತನವಿತ್ತು. ಇಬ್ಬರೂ ಸೀರೆ ಮಾರಾಟ ಕೂಡ ಮಾಡುತ್ತಿದ್ದರು. ಅಂಗಡಿಯಲ್ಲಿದ್ದಾಗ ಶೌಚಕ್ಕೆ ಹೋಗಿ ಬರುವುದಾಗಿ ಹೇಳಿ ಮನೆಯ ಕೀ ಪಡೆದು ತೆರಳಿದ್ದ ವೇಳೆ ಮನೆಯಲ್ಲಿದ್ದ ಚಿನ್ನಾಭರಣ ಕಳವು ಮಾಡಿದ್ದರು ಎಂದು ಪೊಲೀಸರು ಹೇಳಿದ್ದಾರೆ.