
ಕಲಬುರಗಿ: 545 ಪಿಎಸ್ಐ ಹುದ್ದೆಗಳಿಗೆ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಮಗನ ಪರವಾಗಿ ಡೀಲ್ ಮಾಡಿದ್ದ ತಂದೆಯನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ.
ಕಲಬುರ್ಗಿ ಜಿಲ್ಲೆ ಜೇವರ್ಗಿ ನಿವಾಸಿ ವಸಂತ್ ನರಿಬೋಳ್ ಅವರನ್ನು ಬಂಧಿಸಲಾಗಿದೆ. ಪುತ್ರ ಸುನೀಲನ ಪರವಾಗಿ ರುದ್ರಗೌಡ ಪಾಟೀಲನೊಂದಿಗೆ ಡೀಲ್ ಮಾಡಿಕೊಂಡಿದ್ದರು. ತಿಂಗಳ ಹಿಂದೆಯೇ ಅಭ್ಯರ್ಥಿ ಸುನೀಲನನ್ನು ಬಂಧಿಸಲಾಗಿದ್ದು, ಆತನ ಬಂಧನದ ನಂತರ ತಲೆಮರೆಸಿಕೊಂಡಿದ್ದ ವಸಂತ್ ನನ್ನು ಕಳೆದ ರಾತ್ರಿ ಬಂಧಿಸಲಾಗಿದೆ.