
ಅತ್ತಿಬೆಲೆ ಪೊಲೀಸರು ಕಾರ್ಯಾಚರಣೆ ನಡೆಸಿ ಮುಂಬೈ ಗ್ಯಾಂಗ್ ಸ್ಟರ್ ಅಬ್ದುಲ್ ಅಜೀಜ್ ಖಾನ್ ನನ್ನು ಬಂಧಿಸಿದ್ದಾರೆ.
ಕೊಲೆ, ದರೋಡೆ, ಬೆದರಿಕೆ, ಡ್ರಗ್ಸ್ ಪ್ರಕರಣದ ಆರೋಪಿಯಾಗಿರುವ ಅಬ್ದುಲ್ ಅಜಿಜ್ 37 ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ಅತ್ತಿಬೆಲೆ ರೆಸ್ಟೋರೆಂಟ್ ನಲ್ಲಿ ಅಜೀಜ್ ಖಾನ್ ಅಡಗಿದ್ದ ವೇಳೆ ದಾಳಿ ಮಾಡಿದ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಬಂಧಿತನಿಂದ 4 ಜೀವಂತ ಗುಂಡುಗಳು, ಪಿಸ್ತೂಲ್, 15 ಸಿಮ್ ಕಾರ್ಡ್, 6 ಮೊಬೈಲ್ ಫೋನ್ ಜಪ್ತಿ ಮಾಡಲಾಗಿದೆ.