alex Certify ಅಕ್ರಮ ಡ್ರಗ್​​ ವಿಲೇವಾರಿ ಪ್ರಕರಣ: ನೈಜೀರಿಯಾ ಪ್ರಜೆಗಳನ್ನ ಖೆಡ್ಡಾಗೆ ಕೆಡವಿದ ಮಂಗಳೂರು ಪೊಲೀಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಕ್ರಮ ಡ್ರಗ್​​ ವಿಲೇವಾರಿ ಪ್ರಕರಣ: ನೈಜೀರಿಯಾ ಪ್ರಜೆಗಳನ್ನ ಖೆಡ್ಡಾಗೆ ಕೆಡವಿದ ಮಂಗಳೂರು ಪೊಲೀಸ್

ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿರುವ ನೈಜೀರಿಯಾ ದೇಶದ ಪ್ರಜೆಗಳ ಹಾವಳಿ ಜೋರಾಗಿದೆ. ಉದ್ಯಮದ ಹೆಸರಲ್ಲಿ ಅಕ್ರಮ ಚಟುವಟಿಕೆ ನಡೆಸುತ್ತಿದ್ದ ಇಬ್ಬರು ನೈಜೀರಿಯಾ ಪ್ರಜೆಗಳನ್ನ ಎನ್​ಡಿಎಂಎ ಡ್ರಗ್​ ಮಾರಾಟ ಪ್ರಕರಣದಡಿಯಲ್ಲಿ ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನ ಪೌಲ್​​ ಒಹಮೋಬಿ ಅಲಿಯಾಸ್​ ಇಫೆಚುಕು, ಉಚೆಕುಕು ಮಲಾಕಿ ಎಲಕ್ವಾಚಿ ಎಂದು ಗುರುತಿಸಲಾಗಿದೆ. ಈ ಆರೋಪಿಗಳು ಟೀ ಶರ್ಟ್​ ಎಕ್ಸ್​ಪೋರ್ಟ್​ ಉದ್ಯಮದ ಹೆಸರು ಹೇಳಿಕೊಂಡು ಬೆಂಗಳೂರಿನಲ್ಲಿ ನೆಲೆಸಿದ್ದರು ಎನ್ನಲಾಗಿದೆ. ಆದರೆ ಸೂಕ್ತ ತನಿಖೆ ನಡೆಸಿದ ಮಂಗಳೂರು ಪೊಲೀಸರು ಬೆಂಗಳೂರಿನಲ್ಲಿ ಅವಿತಿದ್ದ ಆರೋಪಿಗಳನ್ನ ಖೆಡ್ಡಾಗೆ ಕೆಡುವವಲ್ಲಿ ಯಶಸ್ವಿಯಾಗಿದ್ದಾರೆ.

ಈ ಆರೋಪಿಗಳು ಮಂಗಳೂರು ಹಾಗೂ ಕೇರಳ ಭಾಗದಲ್ಲಿ ಡ್ರಗ್​ ಸಪ್ಲೈ ಮಾಡುತ್ತಿದ್ದರು ಎನ್ನಲಾಗಿದೆ. ಪ್ರಕರಣದಡಿಯಲ್ಲಿ ಈಗಾಗಲೇ 7 ಮಂದಿಯನ್ನ ಬಂಧಿಸಿದ್ದ ಪೊಲೀಸರು ಇದೀಗ ಇನ್ನಿಬ್ಬರನ್ನ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದು, ಈ ಮೂಲಕ ಬಂಧಿತರ ಸಂಖ್ಯೆ 9ಕ್ಕೆ ಏರಿಕೆಯಾಗಿದೆ. 9 ಮಂದಿ ಬಂಧಿತರಲ್ಲಿ ಮೂವರು ನೈಜೀರಿಯಾ ಪ್ರಜೆಗಳು ಎಂದು ತಿಳಿದು ಬಂದಿದೆ. ಬಂಧಿತರಿಂದ 170 ಗ್ರಾಂ ಎಂಡಿಎಂಎ ನಿಷೇಧಿತ ಡ್ರಗ್​ನ್ನು ವಶಕ್ಕೆ ಪಡೆದಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...