ಬೆಂಗಳೂರು: ರಾಷ್ಟ್ರೀಯ ತನಿಖಾ ದಳ(ಎನ್ಐಎ) ಅಧಿಕಾರಿಗಳು ಮತ್ತೊಂದು ಮಹತ್ವದ ಕಾರ್ಯಾಚರಣೆ ನಡೆಸಿದ್ದು, ಪಾಕಿಸ್ತಾನದ ಲಷ್ಕರ್-ಎ-ತೊಯ್ಬಾ ಉಗ್ರ ಸಂಘಟನೆಗೆ ಸೇರಿದ ಶಂಕಿತ ಉಗ್ರನನ್ನು ಬಂಧಿಸಿದ್ದಾರೆ.
ಲಷ್ಕರ್ -ಎ-ತೋಯ್ಬಾ ಸಂಘಟನೆಗೆ ಯುವಕರನ್ನು ನೇಮಕ ಮಾಡಿಸುತ್ತಿದ್ದ ಶಿರಸಿಯ ಶಂಕಿತ ಉಗ್ರರನ್ನು ಬಂಧಿಸಲಾಗಿದೆ. ಶಿರಸಿ ತಾಲೂಕಿನ ಅರೇಕೊಪ್ಪದ ಸೈಯದ್ ಇದ್ರೀಸ್(28) ಬಂಧಿತ ಆರೋಪಿ ಎಂದು ಹೇಳಲಾಗಿದೆ. ಈ ಹಿಂದೆ ಮೂರು ಸಲ ಈತನ ವಿಚಾರಣೆ ನಡೆಸಿದ ಅಧಿಕಾರಿಗಳು, ಸಾಕ್ಷ್ಯಾಧಾರದ ಸಮೇತ ನವೆಂಬರ್ 10 ರಂದು ರಾತ್ರಿ ಬಂಧಿಸಿದ್ದಾರೆನ್ನಲಾಗಿದೆ.