
ಚಿತ್ರದುರ್ಗ: ಚಿತ್ರದುರ್ಗ ಮುರುಘಾ ಮಠದ ಮುರುಘಾ ಶರಣರು ಬಾಲಕಿಯರಿಗೆ ಲೈಂಗಿಕ ದೌರ್ಜನ್ಯ ನೀಡಿದ ಆರೋಪದಡಿ ಬಂಧಿತರಾಗಿ ಜೈಲು ಸೇರಿದ್ದಾರೆ. ಅವರ ವಿರುದ್ಧ ದೂರು ನೀಡುವಂತೆ ಬಾಲಕಿಗೆ ಕುಮ್ಮಕ್ಕು ನೀಡಿದ ಆರೋಪದ ಮೇಲೆ ಶಿಕ್ಷಕನನ್ನು ಬಂಧಿಸಲಾಗಿದೆ.
ಸಂತ್ರಸ್ತ ಬಾಲಕಿಗೆ ಶಿಕ್ಷಕ ಬಸವರಾಜೇಂದ್ರ ಎಂಬಾತ ಪ್ರಚೋದನೆ ನೀಡಿದ ಆಡಿಯೋ ವೈರಲ್ ಆಗಿತ್ತು. ತನಿಖೆ ನಡೆಸಿದ ಚಿತ್ರದುರ್ಗ ಪೊಲೀಸರು ಎಸ್.ಜೆ.ಎಂ. ವಿದ್ಯಾಪೀಠದಲ್ಲಿ ಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿದ್ದ ಅಥಣಿ ಮೂಲದ ಬಸವರಾಜೇಂದ್ರನನ್ನು ಗುರುವಾರ ಬಂಧಿಸಿದ್ದಾರೆ. ಮಠದ ಹಿಂದಿನ ಆಡಳಿತಾಧಿಕಾರಿ ಬಸವರಾಜನ್ ಪ್ರೇರಣೆಯಿಂದ ಸ್ವಾಮೀಜಿ ವಿರುದ್ಧ ದೂರು ನೀಡಲು ಬಸವರಾಜೇಂದ್ರ ಬಾಲಕಿಗೆ ಕುಮ್ಮಕ್ಕು ನೀಡಿದ್ದ ಎಂದು ಹೇಳಲಾಗಿದೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.