
ಬೆಂಗಳೂರು: ಸಿಮ್ ಕಾರ್ಡ್ ಗಳನ್ನು ಕದ್ದು ಬ್ಯಾಂಕ್ ಖಾತೆಗೆ ಕನ್ನ ಹಾಕುತ್ತಿದ್ದವನನ್ನು ಬಂಧಿಸಲಾಗಿದೆ. ಬೆಂಗಳೂರಿನಲ್ಲಿ ಆರೋಪಿ ಜೆ.ಬಿ. ಪ್ರಕಾಶ್(30) ಎಂಬುವವನ್ನು ಬಂಧಿಸಲಾಗಿದೆ. ಈಶಾನ್ಯ ವಿಭಾಗದ ಸಿಇಎನ್ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಪರಿಚಯಸ್ಥರಿಂದ ಮೊಬೈಲ್ ಪಡೆದು ಸಿಮ್ ಕದಿಯುತ್ತಿದ್ದ. ಆ ಮೊಬೈಲ್ ಗೆ ಬೇರೆ ಸಿಮ್ ಗಳನ್ನು ಹಾಕಿ ಹಣ ಎಗರಿಸುತ್ತಿದ್ದ. ಬ್ಯಾಂಕ್ ಖಾತೆ ಲಿಂಕ್ ಆಗಿರುವ ಸಿಮ್ ಗಳನ್ನು ಕದ್ದು ಮೋಸ ಮಾಡುತ್ತಿದ್ದ. ಸಿಮ್ ಕಳೆದಿದೆ ಎಂದು ಮೋಸ ಹೋದವರು ಬ್ಲಾಕ್ ಮಾಡಿಸುತ್ತಿದ್ದರು. ನಕಲಿ ಸಿಮ್ ಪಡೆದು ಆಕ್ಟಿವ್ ಮಾಡಿದಾಗ ವಂಚನೆ ಬೆಳಕಿಗೆ ಬಂದಿದೆ. ಸದ್ಯ ಆರೋಪಿಯಿಂದ 1.30 ಲಕ್ಷ ರೂ., ಎರಡು ಮೊಬೈಲ್ ಹಾಗೂ ಬೈಕ್ ಜಪ್ತಿ ಮಾಡಲಾಗಿದೆ.