ನವದೆಹಲಿ: ಬಾರ್ಡರ್ –ಗವಾಸ್ಕರ್ ಟ್ರೋಫಿ ನಾಲ್ಕನೇ ಟೆಸ್ಟ್ ಪಂದ್ಯದ ವೇಳೆ ಶಂಕಿತ ವ್ಯಕ್ತಿಗಳು ಕರೆ ಮಾಡಿರುವ ಮಾಹಿತಿ ಗೊತ್ತಾಗಿದೆ.
ಕೆಲವರಿಗೆ ಉಗ್ರ ಗುರುಪಂತ್ ವಂತ್ ಸಿಂಗ್ ಕರೆ ಮಾಡಿದ ಮಾಹಿತಿ ಬಹಿರಂಗವಾಗಿದೆ. ಮಾರ್ಚ್ 9 ರಂದು ಗುಜರಾತ್ ನಲ್ಲಿ ಭಾರತ -ಆಸ್ಟ್ರೇಲಿಯಾ ಪ್ರಧಾನಮಂತ್ರಿಗಳ ಭೇಟಿಗೂ ಮೊದಲು ಶಂಕಿತರ ನಡುವೆ ಫೋನ್ ಕರೆ ವಿನಿಮಯವಾಗಿದೆ.
ಉಭಯ ನಾಯಕರು ಅಂದು ಭಾರತ -ಆಸ್ಟ್ರೇಲಿಯಾ ಕ್ರಿಕೆಟ್ ಪಂದ್ಯ ವೀಕ್ಷಿಸಿದ್ದರು. ಈ ವೇಳೆ ಶಂಕಿತ ವ್ಯಕ್ತಿಗಳಿಂದ ಪರಸ್ಪರ ಫೋನ್ ಕರೆಗಳ ಬಗ್ಗೆ ಮಾಹಿತಿ ಗೊತ್ತಾಗಿದೆ. ಕರೆಗಳಲ್ಲಿ ಉಗ್ರ ಗುರುಪಂತ್ ವಂತ್ ಸಿಂಗ್ ಪನ್ನು ಧ್ವನಿ ಇರುವ ಮಾಹಿತಿ ಗೊತ್ತಾಗಿದೆ.
ಈ ಸಂಬಂಧ ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದಲ್ಲಿ ಹಲವರನ್ನು ಬಂಧಿಸಲಾಗಿದೆ. ಮಧ್ಯಪ್ರದೇಶದಲ್ಲಿ ಇಬ್ಬರನ್ನು ಬಂಧಿಸಿದ್ದು, ಸಿಮ್ ಗಳು ಇರುವ 13 ಬಾಕ್ಸ್ ವಶಕ್ಕೆ ಪಡೆಯಲಾಗಿದೆ. ಉತ್ತರ ಪ್ರದೇಶದ ಮೋದಿನಗರ ಪಟ್ಟಣದಲ್ಲಿಯೂ ಸಿಮ್ ಗಳು ಇದ್ದ 3 ಬಾಕ್ಸ್ ವಶಕ್ಕೆ ಪಡೆಯಲಾಗಿದ್ದು, ಮನೆಯಲ್ಲಿದ್ದ ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.