
ಮಡಿಕೇರಿ: ಕಾವೇರಿ ಮಾತೆ ಮತ್ತು ಕೊಡವ ಜನಾಂಗದ ಮಹಿಳೆಯರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ವಿರಾಜಪೇಟೆ ಪಾರಂಗಾಲ ಗ್ರಾಮದ ಕೆ.ಸಿ. ದಿವಿನ್ ದೇವಯ್ಯ(29) ಬಂಧಿತ ಆರೋಪಿ ಎಂದು ಹೇಳಲಾಗಿದೆ. ಈತ ನಕಲಿ ಖಾತೆ ತೆರೆದು ಕೊಡಗಿನ ಮಾತೆ ಕಾವೇರಿ ಮತ್ತು ಕೊಡವ ಜನಾಂಗದ ಮಹಿಳೆಯರ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿದ್ದ.
ಈತನನ್ನು ಬಂಧಿಸುವಂತೆ ಕೊಡವ ಸಮಾಜದ ವಿವಿಧ ಸಂಘಟನೆಗಳು ಹಾಗೂ ಹಿಂದೂಪರ ಸಂಘಟನೆಗಳಿಂದ ಒತ್ತಾಯಿಸಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಕೃತ್ಯಕ್ಕೆ ಬಳಸಿದ್ದ ಮೊಬೈಲ್ ವಶಕ್ಕೆ ಪಡೆಯಲಾಗಿದೆ.