ಬೆಂಗಳೂರು: ಬೆಂಗಳೂರಿನ ಕೆಆರ್ ಪುರಂನಲ್ಲಿ ಹಿಟ್ ಅಂಡ್ ರನ್ ಗೆ ಇಬ್ಬರು ಬಲಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರ ಸಾವಿಗೆ ಕಾರಣನಾಗಿದ್ದ ಆಲ್ಟೊ ಕಾರ್ ಚಾಲಕನನ್ನು ಬಂಧಿಸಲಾಗಿದೆ.
ಬೆಂಗಳೂರಿನ ಹೊಸಕೋಟೆಯ ನಿವಾಸದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಆಂಧ್ರಪ್ರದೇಶದ ಗುಂಟೂರು ಮೂಲದ ವೆಂಕಟ್ ಸಂತೋಷ್ ವೈಟ್ಫೀಲ್ಡ್ ಸಾಫ್ಟ್ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ನಿನ್ನೆ ರಾತ್ರಿ 9 ಗಂಟೆಗೆ ಮೇಡಹಳ್ಳಿಯ ಸ್ಕೈ ವಾಕ್ ಬಳಿ ಅಪಘಾತ ಸಂಭವಿಸಿತ್ತು.
ಆಟೋಗೆ ಡಿಕ್ಕಿ ಹೊಡೆದು ಕಾರ್ ಸಮೇತ ವೆಂಕಟ್ ಸಂತೋಷ್ ಪರಾರಿಯಾಗಿದ್ದ. ಆಂಧ್ರಪ್ರದೇಶ ನೋಂದಣಿ ಸಂಖ್ಯೆಯ ಕಾರ್ ಇದಾಗಿತ್ತು. ಕೆಆರ್ ಪುರಂ ಸಂಚಾರ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿತ್ತು. ಹೊಸಕೋಟೆ ಟೋಲ್ ನಲ್ಲಿದ್ದ ದೃಶ್ಯ ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ.