ಮನೆಯ ನೆಮ್ಮದಿಗೆ ವಾಸ್ತು ಅತ್ಯಗತ್ಯ. ಮನೆಯ ಮೂಲೆ ಮೂಲೆಯಲ್ಲಿಡುವ ವಸ್ತುಗಳನ್ನು ವಾಸ್ತು ಪ್ರಕಾರ ಜೋಡಿಸಿದರೆ ಅದರಿಂದ ಉತ್ತಮ ಫಲ ದೊರೆಯುತ್ತದೆ. ಹಾಗಾಗಿ ಮನೆಯ ಪಶ್ಚಿಮ ದಿಕ್ಕಿನಲ್ಲಿ ಈ ಬಣ್ಣದ ವಸ್ತುಗಳನ್ನು ಇಟ್ಟರೆ ತುಂಬಾ ಒಳ್ಳೆಯದು ಎನ್ನಲಾಗುತ್ತದೆ.
ವಾಸ್ತು ಶಾಸ್ತ್ರದ ಪ್ರಕಾರ ಪಶ್ಚಿಮ ದಿಕ್ಕಿನ ಅಂಶ ಲೋಹವಾಗಿದೆ. ಇದು ಕುಟುಂಬ ಸದಸ್ಯರ ಸಂತೋಷಕ್ಕೆ ಸಂಬಂಧಿಸಿದೆ. ಆದ್ದರಿಂದ ವಾಸ್ತು ಶಾಸ್ತ್ರದ ಪ್ರಕಾರ ದಿಕ್ಕಿನಲ್ಲಿ ಎಲ್ಲವೂ ಚೆನ್ನಾಗಿದ್ದರೆ ಸಂತೋಷವು ಹೆಚ್ಚಾಗುತ್ತದೆ.
ವಾಸ್ತು ಪ್ರಕಾರ ಈ ದಿಕ್ಕಿನಲ್ಲಿ ಬಿಳಿ ಬಣ್ಣವನ್ನು ಇಟ್ಟರೆ ಉತ್ತಮ ಫಲಿತಾಂಶ ಸಿಗುತ್ತದೆ. ಪಶ್ಚಿಮ ದಿಕ್ಕು ಮನೆಯ ಕಿರಿಯ ಮಗಳಿಗೆ ಸಂಬಂಧಿಸಿದೆ. ಆದ ಕಾರಣ ಮಗಳ ಕೋಣೆಯ ಪಶ್ಚಿಮ ದಿಕ್ಕಿನಲ್ಲಿ ಲೋಹದ ವಸ್ತುವನ್ನು ಅಥವಾ ಯಾವುದಾದರೂ ಬಿಳಿ ಬಣ್ಣದ ವಸ್ತುಗಳನ್ನು ಇಟ್ಟುಕೊಂಡರೆ ಆಕೆಯ ಸಂತೋಷ ಹೆಚ್ಚಾಗುತ್ತದೆ. ಹಾಗೇ ಮನೆಯ ವಾತಾವರಣವೂ ಉತ್ತಮವಾಗಿರುತ್ತದೆ.