ಮನೆಯಲ್ಲಿ ಬಳಸುವ ನೀರು ಹಾಗೂ ನೀರಿನ ಸಾಧನಗಳು ಹಣದ ಲಾಭ, ನಷ್ಟಕ್ಕೆ ಕಾರಣವಾಗುತ್ತವೆ. ಹಾಗಾಗಿ ಮನೆಯಲ್ಲಿ ಟ್ಯಾಪ್ ಗಳನ್ನು, ವಾಶ್ ಬೆಸಿನ್, ಗೀಸರ್ ಮತ್ತು ಶವರ್ ಗಳನ್ನು ವಾಸ್ತು ಪ್ರಕಾರ ಸರಿಯಾದ ದಿಕ್ಕಿನಲ್ಲಿ ಜೋಡಿಸಿದರೆ ಉತ್ತಮ ಎಂದು ವಾಸ್ತು ಶಾಸ್ತ್ರಜ್ಞರು ಹೇಳುತ್ತಾರೆ.
ಮನೆಯಲ್ಲಿ ಟ್ಯಾಪ್ ಗಳನ್ನು, ವಾಶ್ ಬಾಸಿನ್, ಗೀಸರ್ ಮತ್ತು ಶವರ್ ಗಳನ್ನು ವಾಸ್ತು ಪ್ರಕಾರ ಸರಿಯಾದ ದಿಕ್ಕಿನಲ್ಲಿ ಜೋಡಿಸಿದಿದ್ದರೆ ನಕರಾತ್ಮಕ ಪರಿಣಾಮವನ್ನು ಬೀರುತ್ತದೆ. ಹಾಗಾಗಿ ವಾಸ್ತುವಿನ ಪ್ರಕಾರ ಮನೆಯ ಈಶಾನ್ಯ ದಿಕ್ಕಿನಲ್ಲಿ ವಾಟರ್ ಟ್ಯಾಪ್ ಮತ್ತು ಶವರ್ ಅಳವಡಿಸಿ. ವಾಶ್ ಬೆಸಿನ್ ಉತ್ತರ ಅಥವಾ ಈಶಾನ್ಯ ದಿಕ್ಕಿನಲ್ಲಿ ಇಡಿ. ಗೀಸರ್ ನ್ನು ಮನೆ ಅಥವಾ ಸ್ನಾನದ ಗ್ರಹ ಉತ್ತರ ದಿಕ್ಕಿನಲ್ಲಿಡಿ.
ಸ್ನಾನಕ್ಕೆ ಬಳಸುವ ಸ್ನಾನದ ಟಬ್ ನ್ನು ಉತ್ತರ ಅಥವಾ ಈಶಾನ್ಯ ದಿಕ್ಕಿನಲ್ಲಿರಿಸಿ. ಮನೆಯ ನೀರಿನ ಒಳಚರಂಡಿಯನ್ನು ಉತ್ತರ ದಿಕ್ಕಿನಲ್ಲಿ ಜೋಡಿಸಿ. ಇದರ ಜೊತೆಗೆ ಟ್ಯಾಪ್ ಮತ್ತ ಶವರ್ ನ್ನು ಸ್ನಾನದ ನಂತರ ಸರಿಯಾಗಿ ಆಫ್ ಮಾಡಬೇಕು. ಯಾಕೆಂದರೆ ಇದರಲ್ಲಿ ನೀರು ಸೋರಿಕೆಯಾದರೆ ಮನೆಯಲ್ಲಿರುವ ಹಣ ಹರಿದು ಹೋಗುತ್ತದೆ. ಅಂದರೆ ಖರ್ಚಾಗುತ್ತದೆ.