ಮುಂಬೈ: ಜಾಗತಿಕ ಆರ್ಥಿಕ ಹಿಂಜರಿತದತ್ತ ಸಾಗುತ್ತಿರುವಾಗ, ಭಾರತದಲ್ಲಿನ ಡೆವಲಪರ್‌ಗಳು ಮಾತ್ರ ವಸತಿ ಬೇಡಿಕೆಯು ಸ್ಥಿರವಾಗಿರುತ್ತದೆ ಎಂದು ನಂಬಿದ್ದಾರೆ. ಕ್ರೆಡೈ, ಕೊಲ್ಲೀರ್ಸ್ ಮತ್ತು ಲಿಯಾಸೆಸ ಫೊರೆಸ್ ನಡೆಸಿದ ಸಮೀಕ್ಷೆಯ ಪ್ರಕಾರ, ಸುಮಾರು 43% ಡೆವಲಪರ್‌ಗಳು ಈ ವರ್ಷದಲ್ಲಿ ವಸತಿ ಬೇಡಿಕೆಯು ಸ್ಥಿರವಾಗಿರುತ್ತದೆ ಎಂದು ಅಂದಾಜಿಸಿದ್ದಾರೆ.
ಭಾರತದಾದ್ಯಂತ ಸುಮಾರು 58% ಡೆವಲಪರ್‌ಗಳು 2023 ರಲ್ಲಿ ವಸತಿ ಬೆಲೆಗಳು ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ ಎಂದಿದ್ದಾರೆ. ಬೆಲೆಗಳ ಏರಿಕೆಯು ಭಾರತೀಯ ಮಾರುಕಟ್ಟೆಯಲ್ಲಿ ಮನೆಗಳಿಗೆ ಬಲವಾದ ಬೇಡಿಕೆಯನ್ನು ಹುಟ್ಟುಹಾಕುತ್ತವೆ. ಜಾಗತಿಕ ಪೂರೈಕೆ ಸರಪಳಿ ಅಡ್ಡಿಯಿಂದಾಗಿ ಕಳೆದೆರಡು ವರ್ಷಗಳಲ್ಲಿ ಕಚ್ಚಾ ವಸ್ತುಗಳ ಬೆಲೆಗಳು ಗಣನೀಯವಾಗಿ ಹೆಚ್ಚಿವೆ, ಇದು ಹಣದುಬ್ಬರದ ಒತ್ತಡಕ್ಕೆ ಕಾರಣವಾಗಿದೆ ಎಂದು ತಜ್ಞರು ಬಣ್ಣಿಸಿದ್ದಾರೆ.
ಸುಮಾರು 43% ಡೆವಲಪರ್‌ಗಳು 2022 ರಲ್ಲಿ ಯೋಜನಾ ವೆಚ್ಚದಲ್ಲಿ 10-20% ಹೆಚ್ಚಳವನ್ನು ಕಂಡಿದ್ದಾರೆ. ಸಮೀಕ್ಷೆಯ ಪ್ರಕಾರ, 62% ಡೆವಲಪರ್‌ಗಳು 2021 ಕ್ಕೆ ಹೋಲಿಸಿದರೆ 2022 ರಲ್ಲಿ ಖರೀದಿದಾರರ ವಿಚಾರಣೆಗಳು ಹೆಚ್ಚಾಗಿದೆ ಎಂದಿದ್ದರೆ, 31% ರಷ್ಟು ಬೇಡಿಕೆಯು 25% ವರೆಗೆ ಹೆಚ್ಚಾಗುತ್ತದೆ ಎಂದು ಭಾವಿಸಿದ್ದಾರೆ. ಅರ್ಧದಷ್ಟು ಡೆವಲಪರ್‌ಗಳು ಸಂಭವನೀಯ ಹಿಂಜರಿತವು ತಮ್ಮ ವ್ಯವಹಾರದ ಮೇಲೆ ಮಧ್ಯಮ ಪ್ರಭಾವವನ್ನು ಬೀರುತ್ತದೆ ಎಂದು ನಂಬುತ್ತಾರೆ.