alex Certify 38 ವರ್ಷಗಳ ಬಳಿಕ ಪತ್ತೆಯಾಯ್ತು ಯೋಧನ ಮೃತದೇಹ: ಹಿಮ ಕುಸಿತದಲ್ಲಿ ನಾಪತ್ತೆಯಾಗಿದ್ದ ಚಂದ್ರಶೇಖರ್ ಹರ್ಬೋಲಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

38 ವರ್ಷಗಳ ಬಳಿಕ ಪತ್ತೆಯಾಯ್ತು ಯೋಧನ ಮೃತದೇಹ: ಹಿಮ ಕುಸಿತದಲ್ಲಿ ನಾಪತ್ತೆಯಾಗಿದ್ದ ಚಂದ್ರಶೇಖರ್ ಹರ್ಬೋಲಾ

ಹಲ್ದ್ವಾನಿ: ಗಸ್ತಿನಲ್ಲಿದ್ದಾಗ ಹಿಮಕುಸಿತದಲ್ಲಿ ನಾಪತ್ತೆಯಾಗಿದ್ದ 38 ವರ್ಷಗಳ ಬಳಿಕ ಸಿಯಾಚಿನ್‌ ಹಳೆಯ ಬಂಕರ್‌ ನಲ್ಲಿ ಸೇನಾ ಯೋಧನ ಶವ ಭಾನುವಾರ ಪತ್ತೆಯಾಗಿದೆ.

ರಾನಿಖೇತ್‌ ನಲ್ಲಿರುವ ಸೈನಿಕ್ ಗ್ರೂಪ್ ಸೆಂಟರ್ 19 ಕುಮಾವ್ ರೆಜಿಮೆಂಟ್‌ ನ ಚಂದ್ರಶೇಖರ್ ಹರ್ಬೋಲಾ ಅವರ ಮೃತದೇಹ ಎಂದು ಗುರುತಿಸಲಾಗಿದೆ.

ಹರ್ಬೋಲಾ 1984 ರಲ್ಲಿ ಪಾಕಿಸ್ತಾನದ ವಿರುದ್ಧ ಹೋರಾಡಲು ‘ಆಪರೇಷನ್ ಮೇಘದೂತ್’ ಗಾಗಿ ವಿಶ್ವದ ಅತಿ ಎತ್ತರದ ಯುದ್ಧಭೂಮಿಗೆ ಕಳುಹಿಸಲ್ಪಟ್ಟ 20 ಸದಸ್ಯರ ಪಡೆಗಳ ಭಾಗವಾಗಿದ್ದರು.

ಗಸ್ತು ತಿರುಗುತ್ತಿದ್ದಾಗ ಅವರು ಹಿಮದ ಬಿರುಗಾಳಿಗೆ ಸಿಲುಕಿದರು. 15 ಸೈನಿಕರ ಶವಗಳು ಪತ್ತೆಯಾಗಿದ್ದು, ಇತರ ಐವರ ಶವಗಳು ಪತ್ತೆಯಾಗಿರಲಿಲ್ಲ. ಅವರಲ್ಲಿ ಹರ್ಬೋಲಾ ಕೂಡ ಒಬ್ಬರು.

ಅಲ್ಮೋರಾ ಮೂಲದ ಅವರ ಪತ್ನಿ ಶಾಂತಿ ದೇವಿ ಪ್ರಸ್ತುತ ಇಲ್ಲಿನ ಸರಸ್ವತಿ ವಿಹಾರ್ ಕಾಲೋನಿಯಲ್ಲಿ ವಾಸಿಸುತ್ತಿದ್ದಾರೆ. ಅವರ ಪಾರ್ಥಿವ ಶರೀರ ಸೋಮವಾರ ತಡರಾತ್ರಿ ಇಲ್ಲಿಗೆ ತಲುಪುವ ನಿರೀಕ್ಷೆಯಿದೆ.

ಹರ್ಬೋಲಾ ಅವರ ಮನೆಗೆ ಆಗಮಿಸಿದ ಹಲ್ದ್ವಾನಿ ಸಬ್ ಕಲೆಕ್ಟರ್ ಮನೀಶ್ ಕುಮಾರ್ ಮತ್ತು ತಹಸೀಲ್ದಾರ್ ಸಂಜಯ್ ಕುಮಾರ್ ಅವರ ಅಂತಿಮ ವಿಧಿವಿಧಾನಗಳನ್ನು ಸಕಲ ಸೇನಾ ಗೌರವಗಳೊಂದಿಗೆ ನೆರವೇರಿಸಲಾಗುವುದು ಎಂದು ಹೇಳಿದರು.

ಆಗ ಶಾಂತಿ ದೇವಿ ಅವರು ಮದುವೆಯಾಗಿ ಒಂಬತ್ತು ವರ್ಷಗಳಾಗಿದ್ದು ಆಕೆಗೆ 28 ​​ವರ್ಷ ವಯಸ್ಸಾಗಿತ್ತು. ಆ ಸಮಯದಲ್ಲಿ ಅವರ ಹಿರಿಯ ಮಗಳು ನಾಲ್ಕು ಮತ್ತು ಕಿರಿಯವಳಿಗೆ ಒಂದೂವರೆ ವರ್ಷ.

ಹರ್ಬೋಲಾ ಅವರು ಜನವರಿ 1984 ರಲ್ಲಿ ಕೊನೆಯ ಬಾರಿಗೆ ಮನೆಗೆ ಬಂದಿದ್ದರು, ಆ ಸಮಯದಲ್ಲಿ ಅವರು ಶೀಘ್ರದಲ್ಲೇ ಹಿಂತಿರುಗುವುದಾಗಿ ಹೇಳಿ ಹೋಗಿದ್ದರು ಎಂದು ಶಾಂತಿದೇವಿ ಹೇಳಿದರು. ಅವರು ಕುಟುಂಬಕ್ಕೆ ನೀಡಿದ ಭರವಸೆಗಿಂತ ದೇಶಕ್ಕಾಗಿ ತನ್ನ ಸೇವೆಗೆ ಆದ್ಯತೆ ನೀಡಿದ್ದರಿಂದ ತನ್ನ ಪತಿ ಬಗ್ಗೆ ಹೆಮ್ಮೆಪಡುತ್ತೇನೆ ಎಂದು ಹೇಳಿದರು.

ಲಭ್ಯ ಮಾಹಿತಿ ಪ್ರಕಾರ ಅಲ್ಮೋರಾದ ದ್ವಾರಹತ್ ನಿವಾಸಿ ಹರ್ಬೋಲಾ 1975ರಲ್ಲಿ ಸೇನೆಗೆ ಸೇರ್ಪಡೆಗೊಂಡಿದ್ದರು. ವರದಿಯ ಪ್ರಕಾರ, ಮತ್ತೊಬ್ಬ ಯೋಧನ ಶವವೂ ಪತ್ತೆಯಾಗಿದೆ. ಆದರೆ, ಆತನ ಗುರುತು ಇನ್ನೂ ಪತ್ತೆಯಾಗಿಲ್ಲ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...