ಬಹೋಪಯೋಗಿ ಸಿಬ್ಬಂದಿ (ಎಂಟಿಎಸ್) ನೇಮಕಾತಿಯಲ್ಲಿ ಕೆಲಸ ಸಿಗುವಂತೆ ಮಾಡುವುದಾಗಿ ಅಭ್ಯರ್ಥಿಯೊಬ್ಬರಿಂದ ಲಂಚ ಕೇಳಿದ ಇಬ್ಬರು ಸೇನಾಧಿಕಾರಿಗಳನ್ನು ಕೇಂದ್ರ ತನಿಖಾ ದಳ (ಸಿಬಿಐ) ಬಂಧಿಸಿದೆ.
ಸೇನಾ ಆರ್ಡಿನೆನ್ಸ್ ಕೋರ್‌ನ ಪುಣೆ ಘಟಕ ಆಯೋಜಿಸಿದ ಪರೀಕ್ಷೆಯೊಂದರಲ್ಲಿ ಪಾಸಾಗಿದ್ದ ಅಭ್ಯರ್ಥಿಯೊಬ್ಬರಿಂದ ಲಂಚ ಕೇಳುತ್ತಿದ್ದ ಅಧಿಕಾರಿಗಳನ್ನು, ದಕ್ಷಿಣ ಕಮಾಂಡ್‌ನ ಸುಶಾಂತ್ ಸಹಕ್ ಹಾಗೂ ನವೀನ್ ಎಂದು ಗುರುತಿಸಲಾಗಿದೆ. ಕೆಲಸ ಕೊಡಿಸುವ ಪ್ರಕ್ರಿಯೆಗಳನ್ನು ತ್ವರಿತವಾಗಿ ಮಾಡುವುದಾಗಿ ಹೇಳಿ 2.5 ಲಕ್ಷ ರೂ.ಗಳ ಲಂಚ ಕೇಳಿದ್ದರು ಈ ಅಧಿಕಾರಿಗಳು.
ಶಾಲೆ ತೊರೆದ 60 ವರ್ಷಗಳ ನಂತರ ವಿಶ್ವವಿದ್ಯಾಲಯದ ಮೆಟ್ಟಿಲು ಹತ್ತಿದ 77ರ ವೃದ್ಧೆ..!
ಮೊದಲಿಗೆ 50,000 ರೂ.ಗಳನ್ನು ಮುಂಗಡವಾಗಿ ನೀಡಲು ಕೋರಿದ್ದ ಈ ಲಂಚಕೋರ ಅಧಿಕಾರಿಗಳಿಗೆ ಮೊದಲಿಗೆ 30,000 ರೂ.ಗಳನ್ನು ಫೋನ್‌ಪೇ ಮೂಲಕ ಆಪಾದಿತನೊಬ್ಬನ ಖಾತೆಗೆ ವರ್ಗಾಯಿಸಿದ್ದಾರೆ ಸಂತ್ರಸ್ತ. ಬಳಿಕ ಮಿಕ್ಕ 20,000 ರೂ.ಗಳನ್ನು ಸಂತ್ರಸ್ತರಿಂದ ಪಡೆದುಕೊಳ್ಳಲು ಆಗಮಿಸಿದ ಈ ಅಧಿಕಾರಿಗಳನ್ನು ಸಿಬಿಐ ಬಲೆ ಬೀಸಿ ಬಂಧಿಸಿತ್ತು.
ಪುಣೆಯಲ್ಲಿರುವ ಈ ಕಳಂಕಿತ ಅಧಿಕಾರಿಗಳ ಮನೆಯಲ್ಲಿ ಶೋಧ ನಡೆಸಿದ ಸಿಬಿಐ ಅಧಿಕಾರಿಗಳು, ಪ್ರಕರಣ ಸಂಬಂಧ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.
ಆಪಾದಿತರಿಬ್ಬರನ್ನು ಸಿಬಿಐನ ವಿಶೇಷ ನ್ಯಾಯಾಲಯದ ಎದುರು ಪ್ರಸ್ತುತಪಡಿಸಲಾಗಿದೆ. ಸದ್ಯ ಇಬ್ಬರನ್ನೂ ಐದು ದಿನಗಳ ಮಟ್ಟಿಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.