
ಮಗ ಮತ್ತು ತಾಯಿಯ ನಡುವಿನ ಬಾಂಧವ್ಯ ಅನೂಹ್ಯವಾದದ್ದು. ವಯಸ್ಸು ಎಷ್ಟೇ ಆದರೂ ಈ ಬಾಂಧವ್ಯ ಎಂದಿಗೂ ಹಚ್ಚ ಹಸಿರು. ಭಾರತೀಯ ಸೇನಾಧಿಕಾರಿಯೊಬ್ಬರು ನಿವೃತ್ತರಾಗುವ ಮುನ್ನ ತನ್ನ ತಾಯಿಗೆ ಕೊನೆಯ ನಮನ ಸಲ್ಲಿಸಿದ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು ನೆಟ್ಟಿಗರು ಭಾವುಕರಾಗಿದ್ದಾರೆ.
ಇದೀಗ ವೈರಲ್ ಆಗಿರುವ ವಿಡಿಯೋವನ್ನು ಮೇಜರ್ ಜನರಲ್ ರಂಜನ್ ಮಹಾಜನ್ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ರಂಜನ್ ಅವರು ಗಂಟೆ ಬಾರಿಸುತ್ತಾ ತಾಯಿಯ ಮನೆಗೆ ಪ್ರವೇಶಿಸುವುದನ್ನು ಕಾಣಬಹುದು. ಅಧಿಕಾರಿ ಸಮವಸ್ತ್ರದಲ್ಲಿದ್ದರು ಮತ್ತು ಸೋಫಾದಲ್ಲಿ ಕುಳಿತಿದ್ದ ಅವರ ತಾಯಿಯ ಕಡೆಗೆ ಹೋಗಿದ್ದಾರೆ.
ಮಗನನ್ನು ನೋಡಿದಾಗ ತಾಯಿ ಸಂತೋಷಪಟ್ಟಿದ್ದು, ತಾಯಿಯನ್ನು ನೋಡಿದ ರಂಜನ್ ಸೆಲ್ಯೂಟ್ ಮಾಡಿದರು. ನಂತರ ತಾಯಿ-ಮಗ ಇಬ್ಬರೂ ಒಬ್ಬರನ್ನೊಬ್ಬರು ತಬ್ಬಿಕೊಂಡರು ಮತ್ತು ಇಡೀ ಕ್ಷಣವು ತುಂಬಾ ಹೃದಯಸ್ಪರ್ಶಿಯಾಗಿತ್ತು.
“ನನ್ನ ಸಮವಸ್ತ್ರವನ್ನು ನೇತುಹಾಕುವ ಮೊದಲು ನನ್ನ ತಾಯಿಗೆ ಅಂತಿಮ ನಮನಗಳು. ನಾವು ಅಂಬಾಲಾದಿಂದ ದೆಹಲಿಗೆ ಹೋಗಿದ್ದೆವು. 35 ವರ್ಷಗಳ ಕಾಲ ಹೆಮ್ಮೆಯಿಂದ ನನ್ನ ತಾಯಿನಾಡಿಗೆ ಸೇವೆ ಸಲ್ಲಿಸಲು ಜನ್ಮ ನೀಡಿದ ಮತ್ತು ಈ ಜೀವನ ಮತ್ತು ಸಮವಸ್ತ್ರಕ್ಕೆ ನನ್ನನ್ನು ಅರ್ಹರನ್ನಾಗಿ ಮಾಡಿದ ನನ್ನ ತಾಯಿಗೆ ಸಂಪೂರ್ಣ ನಮನ ಸಲ್ಲಿಸುತ್ತಿದ್ದೇನೆ. ಒಂದು ಅವಕಾಶವನ್ನು ನೀಡಿದರೆ ಮತ್ತೊಮ್ಮೆ ಗಣ್ಯ ಭಾರತೀಯ ಸೇನೆಗೆ ಸೇವೆ ಸಲ್ಲಿಸಲು ಯಾವಾಗಲೂ ಸಿದ್ಧವಾಗಿರುತ್ತೇನೆ.” ಎಂದು ರಂಜನ್ ಮಹಾಜನ್ ಪೋಸ್ಟ್ ಗೆ ಶೀರ್ಷಿಕೆ ನೀಡಿದ್ದಾರೆ. ಆನ್‌ಲೈನ್‌ನಲ್ಲಿ ಶೇರ್ ಮಾಡಿದ ನಂತರ 5 ಲಕ್ಷ ವೀಕ್ಷಣೆ ಕಂಡಿದೆ.