ಬೆಂಗಳೂರು: ಸೇನಾ ವಾಹನ ಅಪಘಾತದಲ್ಲಿ ರಾಜ್ಯದ ನಾಲ್ವರು ಯೋಧರು ಹುತಾತ್ಮರಾಗಿದ್ದಾರೆ. ಉಧಂಪುರ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 28 ವರ್ಷದ ಯೋಧ ದಿವಿನ್ ಚಿಕಿತ್ಸೆ ಫಲಕಾರಿಯಾಗದೇ ಭಾನುವಾರ ರಾತ್ರಿ ಹುತಾತ್ಮರಾಗಿದ್ದಾರೆ.
ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಆಲೂರು ನಿವಾಸಿ ದಿವಿನ್ ಹುತಾತ್ಮರಾಗಿದ್ದಾರೆ. ಡಿಸೆಂಬರ್ 24ರಂದು ಜಮ್ಮು -ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಅಪಘಾತ ಸಂಭವಿಸಿತ್ತು. ಚಾಲಕನ ನಿಯಂತ್ರಣ ತಪ್ಪಿ 160 ಅಡಿ ಆಳದ ಕಂದಕಕ್ಕೆ ವಾಹನ ಉರುಳಿ ಬಿದ್ದಿತ್ತು. ರಾಜ್ಯದ ಮೂವರು ಯೋಧರು ಡಿಸೆಂಬರ್ 24ರಂದು ಹುತಾತ್ಮರಾಗಿದ್ದರು.
ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಬಿಜಾಡಿ ನಿವಾಸಿ ಅನೂಪ್ ಪೂಜಾರಿ, ಬೆಳಗಾವಿ ತಾಲೂಕಿನ ಸಾಂಬ್ರಾ ಗ್ರಾಮದ ನಿವಾಸಿ ದಯಾನಂದ ತಿರಕಣ್ಣನವರ, ಬಾಗಲಕೋಟೆ ಜಿಲ್ಲೆ ರಬಕವಿ -ಬನಹಟ್ಟಿ ತಾಲೂಕಿನ ಮಹಾಲಿಂಗಪುರ ಗ್ರಾಮದ ಮಹೇಶ ನಾಗಪ್ಪ ಮಾರಿಗೊಂಡ ಹುತಾತ್ಮರಾಗಿದ್ದರು. ಭಾನುವಾರ ದಿವಿನ್ ಅವರೂ ಹುತಾತ್ಮರಾಗಿದ್ದಾರೆ.