ಅರುಣಾಚಲ ಪ್ರದೇಶದಲ್ಲಿ ಸೇನಾ ಹೆಲಿಕಾಪ್ಟರ್ ಪತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಮೃತಪಟ್ಟಿರುವುದನ್ನು ಭಾರತೀಯ ಸೇನೆ ದೃಢಪಡಿಸಿದೆ.
ಇಬ್ಬರ ಮೃತದೇಹಗಳನ್ನು ಸೇನಾ ಸಿಬ್ಬಂದಿ ಹೊರಗೆ ತೆಗೆದಿದ್ದು, ಮತ್ತೊಬ್ಬರ ಮೃತ ದೇಹಕ್ಕಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ. ಸಿಯಾಂಗ್ ಜಿಲ್ಲೆ ಸಿಂಗಿಂಗ್ ಬಳಿ ಹೆಲಿಕಾಪ್ಟರ್ ಪತನವಾಗಿತ್ತು. ಸೇನಾ ಹೆಲಿಕಾಪ್ಟರ್ ಪತನವಾಗಿ ಮೂವರು ಕಾಣೆಯಾಗಿದ್ದರು.
ಅರುಣಾಚಲ ಪ್ರದೇಶದ ಅಪ್ಪರ್ ಸಿಯಾಂಗ್ ಜಿಲ್ಲೆಯ ಟ್ಯೂಟಿಂಗ್ ಪ್ರಧಾನ ಕಚೇರಿಯಿಂದ 25 ಕಿಮೀ ದೂರದಲ್ಲಿರುವ ಮಿಗ್ಗಿಂಗ್ ಗ್ರಾಮದ ಬಳಿ ಸುಧಾರಿತ ಸೇನಾ ಲಘು ಹೆಲಿಕಾಪ್ಟರ್(ALH) ಹೆಲಿಕಾಪ್ಟರ್ ಅಪಘಾತಕ್ಕೀಡಾಗಿತ್ತು.