alex Certify BREAKING: ಸೇನಾ ವಿಮಾನ ಪತನ; ಅದೃಷ್ಟವಶಾತ್ ಪೈಲಟ್‌ಗಳು ಪಾರು | Video | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ಸೇನಾ ವಿಮಾನ ಪತನ; ಅದೃಷ್ಟವಶಾತ್ ಪೈಲಟ್‌ಗಳು ಪಾರು | Video

ಮಧ್ಯಪ್ರದೇಶದ ಶಿವಪುರಿಯಲ್ಲಿ ಇಂದು ಭೀಕರ ದುರಂತ ಸಂಭವಿಸಿದೆ. ಭಾರತೀಯ ಸೇನೆಯ ಫೈಟರ್‌ ಜೆಟ್‌ ವಿಮಾನ ಒಂದು ಪತನಗೊಂಡು ಹೊತ್ತಿ ಉರಿದಿದೆ. ವಿಮಾನ ನರ್ವಾರ್ ತಹಸಿಲ್‌ನ ದಬ್ರಸಾನಿ ಗ್ರಾಮದ ಬಳಿ ಹೊಲದಲ್ಲಿ ಪತನಗೊಂಡಿದೆ.

ಪತನದ ನಂತರ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡು ಸಂಪೂರ್ಣವಾಗಿ ಸುಟ್ಟುಹೋಯಿತು. ಅದೃಷ್ಟವಶಾತ್ ಇದರಲ್ಲಿದ್ದ ಇಬ್ಬರು ಪೈಲಟ್‌ಗಳು ಅಲ್ಪಸ್ವಲ್ಪ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ಜನವಸತಿ ಪ್ರದೇಶದಲ್ಲಿ ವಿಮಾನ ಪತನವಾಗದಂತೆ ನೋಡಿಕೊಂಡ ಪೈಲೆಟ್‌ ಗಳು ಹೊಲದಲ್ಲಿ ಬೀಳುವಂತೆ ಮಾಡಿದ್ದಾರೆ.

ವಿಮಾನ ಪತನಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ. ಪೋಲಿಸ್ ಮತ್ತು ಆಡಳಿತ ಅಧಿಕಾರಿಗಳು ಘಟನಾ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸುತ್ತಿದ್ದು, ತನಿಖೆ ಪ್ರಗತಿಯಲ್ಲಿದೆ.

ಘಟನೆ ಬಳಿಕ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ಸ್ಥಳದಲ್ಲಿ ಜಮಾಯಿಸಿದ್ದು,ಪೈಲಟ್‌ಗಳನ್ನು ವಿಮಾನದಿಂದ ಹೊರತೆಗೆಯಲು ಸಹಾಯ ಮಾಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...