ಭಾರತೀಯ ಸೇನೆಯು, ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ನ ಸಹಯೋಗದೊಂದಿಗೆ ವಿಶ್ವದ ಅತಿ ಎತ್ತರದ ಯುದ್ಧಭೂಮಿಯಾದ ಹಿಮಾಲಯದ ಸಿಯಾಚಿನ್ ಗ್ಲೇಸಿಯರ್‌ನಲ್ಲಿ ಮೊಟ್ಟಮೊದಲ BSNL ಬೇಸ್ ಟ್ರಾನ್ಸ್ ಸಿವರ್ ಸ್ಟೇಷನ್ (BTS) ಅನ್ನು ಸ್ಥಾಪಿಸಿದೆ.
“ಸಿಯಾಚಿನ್ ವಾರಿಯರ್ಸ್ BSNL ಸಹಯೋಗದೊಂದಿಗೆ 15,500 ಅಡಿಗಳಿಗಿಂತ ಹೆಚ್ಚು ಎತ್ತರದಲ್ಲಿ ನಿಯೋಜಿಸಲಾದ ಸೈನಿಕರಿಗೆ ಮೊಬೈಲ್ ಸಂವಹನವನ್ನು ವಿಸ್ತರಿಸಲು ಅಕ್ಟೋಬರ್ 6 ರಂದು ಅತ್ಯುನ್ನತ ಯುದ್ಧಭೂಮಿಯಲ್ಲಿ ಮೊದಲ ಬಾರಿಗೆ BSNL BTS ಅನ್ನು ಸ್ಥಾಪಿಸಿತು” ಎಂದು ಭಾರತೀಯ ಸೇನೆಯ ಫೈರ್ ಮತ್ತು ಫ್ಯೂರಿ ಕಾರ್ಪ್ಸ್ ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದೆ.
ಬೇಸ್ ಟ್ರಾನ್ಸ್ ಸಿವರ್ ಸ್ಟೇಷನ್ (BTS) ಯಾವುದೇ ಮೊಬೈಲ್ ನೆಟ್‌ವರ್ಕ್ ನಲ್ಲಿನ ಸ್ಥಿರ ರೇಡಿಯೋ ಟ್ರಾನ್ಸ್ ಸಿವರ್ ಆಗಿದೆ. BTS ಮೊಬೈಲ್ ಸಾಧನಗಳನ್ನು ನೆಟ್ ವರ್ಕ್ ಗೆ ಸಂಪರ್ಕಿಸುತ್ತದೆ. ಇದು ಮೊಬೈಲ್ ಸಾಧನಗಳಿಗೆ ರೇಡಿಯೊ ಸಿಗ್ನಲ್‌ಗಳನ್ನು ಕಳುಹಿಸುತ್ತದೆ ಮತ್ತು ಸ್ವೀಕರಿಸುತ್ತದೆ ಮತ್ತು ಅವುಗಳನ್ನು ನೆಟ್‌ವರ್ಕ್‌ನಲ್ಲಿ ಇತರ ಟರ್ಮಿನಲ್‌ಗಳಿಗೆ ಅಥವಾ ಇಂಟರ್ನೆಟ್‌ಗೆ ರವಾನಿಸಲು ಡಿಜಿಟಲ್ ಸಿಗ್ನಲ್‌ಗಳಾಗಿ ಪರಿವರ್ತಿಸುತ್ತದೆ.
ಸಿಯಾಚಿನ್ ಗ್ಲೇಸಿಯರ್ ಅನ್ನು ವಿಶ್ವದ ಅತಿ ಎತ್ತರದ ಯುದ್ಧ ತಾಣವೆಂದು ಕರೆಯಲಾಗುತ್ತದೆ ಮತ್ತು ಇದು ಇಂಡೋ-ಪಾಕ್ ನಿಯಂತ್ರಣ ರೇಖೆಯ ಸಮೀಪದಲ್ಲಿದೆ.