ಕಾನ್ಪುರ್: ಉತ್ತರ ಪ್ರದೇಶದ ಕಾನ್ಪುರ್ ದ ಕಂಟೋನ್ಮೆಂಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬ ಸ್ನೇಹಿತನ ಪತ್ನಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ.
ಆರ್ಮಿ ಕರ್ನಲ್ ಆಗಿರುವ ವ್ಯಕ್ತಿ ಅತ್ಯಾಚಾರವೆಸಗಿದ ಆರೋಪಿ ಎಂದು ಹೇಳಲಾಗಿದೆ. ತನ್ನ ಬಾಲ್ಯದ ಸ್ನೇಹಿತ ಮತ್ತು ಆತನ ಪತ್ನಿ ರಷ್ಯಾ ಮೂಲದ ಮಹಿಳೆಯನ್ನು ಪಾರ್ಟಿಗೆ ಆಹ್ವಾನಿಸಿದ್ದ ಕರ್ನಲ್ ಇಬ್ಬರಿಗೂ ಮತ್ತು ಬರುವ ಪಾನೀಯ ಕೊಟ್ಟಿದ್ದಾನೆ.
ದಂಪತಿ ಪ್ರಜ್ಞೆ ತಪ್ಪಿದ ವೇಳೆಯಲ್ಲಿ ಸ್ನೇಹಿತನ ಪತ್ನಿಯ ಮೇಲೆ ಅತ್ಯಾಚಾರವೆಸಗಿ ಪರಾರಿಯಾಗಿದ್ದಾನೆ. ಪ್ರಜ್ಞೆ ಮರಳಿದ ನಂತರ ಸ್ನೇಹಿತ ಪತ್ನಿಯೊಂದಿಗೆ ತೆರಳಿ ಕಂಟೋನ್ಮೆಂಟ್ ಠಾಣೆ ಪೊಲೀಸರಿಗೆ ದೂರು ನೀಡಿದ್ದಾನೆ. ಪೊಲೀಸರು ಕರ್ನಲ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಲೆಫ್ಟಿನೆಂಟ್ ಹುದ್ದೆಯಿಂದ ಕರ್ನಲ್ ಹುದ್ದೆಗೆ ಬಡ್ತಿ ಪಡೆದ ವ್ಯಕ್ತಿ ಪಾರ್ಟಿಗೆ ಗೆಳೆಯ ಹಾಗೂ ಆತನ ಪತ್ನಿ ಆಹ್ವಾನಿಸಿ ಇಂತಹ ಕೃತ್ಯವೆಸಗಿದ್ದು, ಮಹಿಳೆ ಪ್ರತಿರೋಧ ತೋರಿದಾಗ ಹಲ್ಲೆ ಮಾಡಲಾಗಿದೆ. ಸೇನಾಧಿಕಾರಿ ವಿರುದ್ಧ ಎಫ್ಐಆರ್ ದಾಖಲಾಗಿದೆ ಎಂದು ಕಾನ್ಪುರ್ ಪೂರ್ವ ಪೊಲೀಸ್ ವರಿಷ್ಠಾಧಿಕಾರಿ ರಾಜ್ ಕುಮಾರ್ ಅಗರವಾಲ್ ತಿಳಿಸಿದ್ದಾರೆ.