
ಬೆಂಗಳೂರು: ಬೆಂಗಳೂರು ಉತ್ತರ ತಾಲೂಕಿನ ನೆಲಮಂಗಲ ಬಳಿ ಅರ್ಕಾವತಿ ನದಿಯಲ್ಲಿ ಅಪರಿಚಿತ ಮಹಿಳೆಯೊಬ್ಬರ ಶವ ಪತ್ತೆಯಾಗಿದೆ.
ಹಸು ಮೇಯಿಸಲು ನದಿ ತೀರಕ್ಕೆ ಹೋಗಿದ್ದ ಸ್ಥಳೀಯರು ಅರ್ಕಾವತಿ ನದಿಯಲ್ಲಿ ತೇಲುತ್ತಿದ್ದ ಮಹಿಳೆಯ ಶವ ಕಂಡು ಕಂಗಾಲಾಗಿದ್ದಾರೆ. ತಕ್ಷಣ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ.
ಸುಮಾರು 35 ವರ್ಷದ ಮಹಿಳೆಯ ಶವವಾಗಿದ್ದು, ಮೃತದೇಹ ಕೊಳೆತ ಸ್ಥಿತಿಯಲ್ಲಿದೆ. ಮಹಿಳೆಯನ್ನು ಕೊಲೆಗೈದು ಶವ ತಂದು ನದಿಗೆ ಬಿಸಾಕಿ ಹೋಗಿರುವ ಶಂಕೆ ವ್ಯಕ್ತವಾಗಿದೆ. ಮಾದನಾಯಕನಹಳ್ಳಿ ಪೊಲಿಸರು ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.