alex Certify ವರದಕ್ಷಿಣೆ ಕಿರುಕುಳ: ಕಬಡ್ಡಿ ಆಟಗಾರ ಪತಿ ದೀಪಕ್ ಹೂಡಾ ವಿರುದ್ದ ಅರ್ಜುನ ಪ್ರಶಸ್ತಿ ಪುರಸ್ಕೃತ ಬಾಕ್ಸರ್ ಸವೀತಿ ಬೂರಾ ದೂರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವರದಕ್ಷಿಣೆ ಕಿರುಕುಳ: ಕಬಡ್ಡಿ ಆಟಗಾರ ಪತಿ ದೀಪಕ್ ಹೂಡಾ ವಿರುದ್ದ ಅರ್ಜುನ ಪ್ರಶಸ್ತಿ ಪುರಸ್ಕೃತ ಬಾಕ್ಸರ್ ಸವೀತಿ ಬೂರಾ ದೂರು

ಚಂಡೀಗಡ: ಮಾಜಿ ವಿಶ್ವ ಬಾಕ್ಸಿಂಗ್ ಚಾಂಪಿಯನ್, ಅರ್ಜುನ ಪ್ರಶಸ್ತಿ ಪುರಸ್ಕೃತೆ ಸವೀತಿ ಬೂರಾ ಅವರು ತಮ್ಮ ಪತಿ ಮಾಜಿ ಕಬಡ್ಡಿ ಆಟಗಾರ, ಏಷ್ಯನ್ ಗೇಮ್ಸ್ ಕಂಚಿನ ಪದಕ ವಿಜೇತ ದೀಪಕ್ ಹೂಡಾ ಮತ್ತು ಅವರ ಕುಟುಂಬದ ವಿರುದ್ಧ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ದೂರು ದಾಖಲಿಸಿದ್ದಾರೆ.

ಹೆಚ್ಚುವರಿ ವರದಕ್ಷಿಣೆಗಾಗಿ ಪತಿ, ಆತನ ಮನೆಯವರು ಬೇಡಿಕೆ ಇಟ್ಟಿರುವುದಾಗಿ ಸವೀತಿ ಆರೋಪಿಸಿ ದೂರು ನೀಡಿದ್ದು, ಅವರ ದೂರಿನ ಆದರದ ಮೇರೆಗೆ ಪತಿ ದೀಪಕ್ ಹೂಡಾ ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧ ಹರಿಯಾಣದ ಹಿಸಾರ್ ಪೋಲಿಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದು, ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.

ಹೆಚ್ಚುವರಿ ವರದಕ್ಷಿಣೆ ಹಾಗೂ ಫಾರ್ಚುನರ್ ಕಾರ್ ಕೊಡುವಂತೆ ಪತಿ ಪೀಡಿಸುತ್ತಿದ್ದಾರೆ. ಹಲ್ಲೆ ಮಾಡಿದ್ದಾರೆ ಎಂದು ಸವೀತಿ ಆರೋಪಿಸಿ ದೂರು ನೀಡಿದ್ದಾರೆ. ಇವರಿಬ್ಬರೂ 2022 ರಲ್ಲಿ ಮದುವೆಯಾಗಿದ್ದರು. ಫೆಬ್ರವರಿ 25ರಂದು ದೂರು ಸಲ್ಲಿಕೆಯಾಗಿದ್ದು, ಎಫ್ಐಆರ್  ದಾಖಲಿಸಲಾಗಿದೆ. ದೀಪಕ್ ಹೂಡಾ ಅವರಿಗೆ ಎರಡು ಮೂರು ಬಾರಿ ನೋಟಿಸ್ ನೀಡಿದ್ದು, ಅವರು ವಿಚಾರಣೆಗೆ ಹಾಜರಾಗಿಲ್ಲ ಎಂದು ಹಿಸಾರ್ ಮಹಿಳಾ ಪೋಲಿಸ್ ಠಾಣೆ ಎಸ್.ಹೆಚ್.ಒ. ಸೀಮಾ ಹೇಳಿದ್ದಾರೆ.

ನಾನು ವೈದ್ಯಕೀಯ ಪ್ರಮಾಣಪತ್ರವನ್ನು ಸಲ್ಲಿಸಿದ್ದೇನೆ. ನಂತರ ವಿಚಾರಣೆಗೆ ಬರುವುದಾಗಿ ತಿಳಿಸಿದ್ದೇನೆ. ನಾನು ಖಂಡಿತವಾಗಿಯೂ ಪೊಲೀಸ್ ಠಾಣೆಗೆ ಹೋಗುತ್ತೇನೆ. ಆದರೆ ನಾನು ನನ್ನ ಪತ್ನಿಯ ವಿರುದ್ಧ ನಕಾರಾತ್ಮಕ ಕಾಮೆಂಟ್ ಮಾಡುವುದಿಲ್ಲ. ನನಗೆ ಅವರನ್ನು ಭೇಟಿ ಮಾಡಲು ಅವಕಾಶ ನೀಡಲಾಗಿಲ್ಲ ಎಂದು ಹೂಡಾ ತಿಳಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...