ಅರ್ಬಾಜ್ ಖಾನ್ ಜೊತೆಗಿನ ಸಂಬಂಧ ಕಡಿದುಕೊಂಡ ಮಲೈಕಾ ಆರೋರಾ, ಡೈವೋರ್ಸ್ ಪಡೆದುಕೊಂಡ ಬಳಿಕ ಅರ್ಜುನ್ ಕಪೂರ್ ಜೊತೆ ಡೇಟಿಂಗ್ ನಲ್ಲಿದ್ದು 2019 ರಲ್ಲಿ ತಮ್ಮ ಸಂಬಂಧವನ್ನು ಅಧಿಕೃತಗೊಳಿಸಿದ್ದರು. ಐದು ವರ್ಷಗಳ ಅವರ ಸಂಬಂಧ ಕೊನೆಗೊಂಡಿದೆ ಎಂದು ಕಳೆದ ಕೆಲವು ತಿಂಗಳುಗಳಿಂದ ವದಂತಿ ಕೇಳಿ ಬರುತ್ತಿತ್ತು.
ಇದೀಗ, ದೀಪಾವಳಿ ಕಾರ್ಯಕ್ರಮವೊಂದರಲ್ಲಿ ಅರ್ಜುನ್ ಕಪೂರ್, ಮಲೈಕಾ ಜೊತೆಗಿನ ತಮ್ಮ ಬ್ರೇಕಪ್ ಅನ್ನು ಅಂತಿಮವಾಗಿ ಖಚಿತಪಡಿಸಿದ್ದಾರೆ. ಅಕ್ಟೋಬರ್ 28 ರ ಸೋಮವಾರದಂದು ಅರ್ಜುನ್ ಕಪೂರ್, ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ರಾಜ್ ಠಾಕ್ರೆ ಆಯೋಜಿಸಿದ್ದ ದೀಪಾವಳಿಯ ಸಂಭ್ರಮದಲ್ಲಿ ಪಾಲ್ಗೊಂಡಿದ್ದು, ತಮ್ಮ ಸಹ-ನಟರಾದ ಅಜಯ್ ದೇವಗನ್ ಮತ್ತು ಟೈಗರ್ ಶ್ರಾಫ್ ಮತ್ತು ಅವರ ಮುಂಬರುವ ಚಿತ್ರ ಸಿಂಗಮ್ ಎಗೇನ್‌ನ ನಿರ್ದೇಶಕ ರೋಹಿತ್ ಶೆಟ್ಟಿ ಅವರೊಂದಿಗೆ ಇದ್ದರು.
ಸಮಾರಂಭದಲ್ಲಿ ಅರ್ಜುನ್ ಅವರನ್ನು ಸನ್ಮಾನಿಸಿದ ನಂತರ ಅವರು ತಮ್ಮ ಅಭಿಮಾನಿಗಳೊಂದಿಗೆ ಮಾತನಾಡಿದ್ದು, ಅದೇ ಸಂವಾದದ ಸಮಯದಲ್ಲಿ, “ಅಭಿ ಸಿಂಗಲ್ ಹೂನ್ (ಈಗ ನಾನು ಒಂಟಿಯಾಗಿದ್ದೇನೆ)” ಎಂದು ಹೇಳುವ ಮೂಲಕ ಮಲೈಕಾ ಜೊತೆಗಿನ ಬ್ರೇಕಪ್ ದೃಢಪಡಿಸಿದ್ದಾರೆ. ಅವರ ವೀಡಿಯೊವನ್ನು ಸೆಲೆಬ್ರಿಟಿ ಪಾಪರಾಜೋ ವರೀಂದರ್ ಚಾವ್ಲಾ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.